ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಂದು ಚಾರಿತ್ರಿಕ ಐಸಿರಿಯ ಕಂಪ್ಲಿಯ ಸೋಮೇಶ್ವರ ಜಾತ್ರಾ ಮಹೋತ್ಸವ

ಬಳ್ಳಾರಿ / ಕಂಪ್ಲಿ : ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವ ಜರಗಲಿದೆ ಈ ಕಾರ್ಯಕ್ರಮದಲ್ಲಿ ಮಹಾರುದ್ರಾಭಿಷೇಕ, ಮಹಾಭಿಷೇಕ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಇಂದು ಸಂಜೆ 6:00 ಗಂಟೆಗೆ ಭಕ್ತರಿಂದ ಮಹಾ ರಥೋತ್ಸವ ಕಾರ್ಯಕ್ರಮ ಜರಗಲಿದೆ.

ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನದ ಬಗ್ಗೆ ವಿಶೇಷ ವರದಿ

ನಗರದ ಹೃದಯಭಾಗದ ಸೋಮಪ್ಪನ ಕೆರೆ ದಡದಲ್ಲಿರುವ ಐತಿಹಾಸಿಕ ಸೋಮಪ್ಪ(ಸೋಮೇಶ್ವರ) ದೇವಾಲಯ ಪೂರ್ವಾಭಿಮುಖವಾಗಿದ್ದು, ಸುಮಾರು 900 ವರ್ಷಗಳ ಇತಿಹಾಸ ಹೊಂದಿದೆ.

ಪ್ರಸ್ತುತ ದೇವಸ್ಥಾನದಲ್ಲಿ ಸ್ಥಾಪನೆಗೊಂಡಿರುವ ಸೋಮೇಶ್ವರ, ಗಂಡುಗಲಿ ಕುಮಾರರಾಮನ ಆರಾಧ್ಯ ದೈವರಾಗಿದ್ದು, ಅಂತೆಯೇ ಮನೆ ದೇವರೂ ಕೂಡಾ ಆಗಿರುವುದು ವಿಶೇಷ.

ಕಂಪಿಲರಾಯ, ಕುಮಾರರಾಮ ಅವರು ಪ್ರಮುಖ ಕಾರ್ಯಗಳಿಗೆ ತೆರಳುವ ಮುನ್ನ ಸೋಮೇಶ್ವರನ ದರ್ಶನ ಪಡೆಯದೆ ಹೋಗುತ್ತಿರಲಿಲ್ಲವಂತೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸೋಮೇಶ್ವರನ ಅನುಗ್ರಹವು ಇತ್ತು ಎನ್ನುವ ಅಭಿಮತ ಇತಿಹಾಸಕಾರರಿಂದ ವ್ಯಕ್ತವಾಗಿದೆ.

ದರೋಜಿ ಇತಿಹಾಸದಂತೆ ಸಿಂಧು ಬಲ್ಲಾಳರಾಯನು ಕಲ್ಯಾಣ ಪಟ್ಟಣದಿಂದ ಸೋಮೇಶ್ವರನ ವಿಗ್ರಹವನ್ನು ಬಂಡಿಯಲ್ಲಿ ಹೇರಿಕೊಂಡು ಬರುವಾಗ ಸದ್ಯ ದೇವಸ್ಥಾನವಿರುವ ಸ್ಥಳದಲ್ಲಿ ವಿಶ್ರಾಂತಿಗಾಗಿ ತಂಗುತ್ತಾನೆ. ನಾಲ್ಕು ದಿನದ ಬಳಿಕ ಹೊರಡಲು ಸಿದ್ಧರಾದಾಗ ಬಂಡಿ ಕೀಲು ಮುರಿಯುತ್ತದೆ. ಆಗ ಬಲ್ಲಾಳರಾಯ ಮರುದಿನ ಪ್ರಯಾಣ ಬೆಳೆಸಲು ನಿರ್ಧರಿಸಿ ಅಲ್ಲಿಯೇ ಮಲಗುತ್ತಾನೆ. ರಾತ್ರಿ ಕನಸಿನಲ್ಲಿ ಸೋಮೇಶ್ವರ ಪ್ರತ್ಯಕ್ಷನಾಗಿ ‘ನನ್ನ ಈ ವಿಗ್ರಹ ಸ್ಥಳಾಂತರಿಸದೆ ಇಲ್ಲಿಯೇ ದೇವಸ್ಥಾನ ನಿರ್ಮಿಸು’ ಎಂದು ಅಪ್ಪಣೆ ಮಾಡುತ್ತಾನೆ. ಆ ಪ್ರಕಾರ ದೇವಸ್ಥಾನ ನಿರ್ಮಿಸಿ ಸೋಮೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಯಿತು ಎಂದು ಸ್ಥಳೀಯ ಉಲ್ಲೇಖವೊಂದು ದೃಢಪಡಿಸುತ್ತದೆ.

ಆದರೆ ಬೇರೆ ಬೇರೆ ರಾಜರು, ಸಾಮಂತರ ಈ ದೇವಸ್ಥಾನ ನಿರ್ಮಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಕಾಲಕಾಲಕ್ಕೆ ಜೀರ್ಣೋದ್ಧಾರ:
ಸೋಮೇಶ್ವರ ದೇವಾಲಯ ಕಾಲಕಾಲಕ್ಕೆ ಜೀರ್ಣೋದ್ಧಾರಗೊಂಡಿದೆ. ನೊಳಂಬರ ಕಾಲದಲ್ಲಿ ‘ಅದಿಷ್ಟಾನ’ ನಿರ್ಮಿಸಿದ್ದರೆ, ‘ಭಿತ್ತಿಭಾಗ, ಶಿಖರದ ಗಾರೆ’ ರಚನೆಗಳು ಹಾಗೂ ದೇವಾಲಯದ ಒಳಭಾಗಗಳು ಕ್ರಿ.ಶ 14ನೇ ಶತಮಾನದ ರಚನೆಯಾಗಿವೆ. ವಿಜಯನಗರೋತ್ತರ ಕಾಲದಲ್ಲಿ ಮತ್ತು ನಂತರದ ಕಾಲಗಳಲ್ಲಿ ಎರಡು ಬಾರಿ ಜೀರ್ಣೋದ್ಧಾರಗೊಂಡಿದೆ ಎಂದು ದಾಖಲೆಯಿಂದ ತಿಳಿದು ಬರುತ್ತದೆ.

ಸೋಮೇಶ್ವರ ಅಪರೂಪದ ವಿಗ್ರಹ

ಗರ್ಭಗುಡಿಯಲ್ಲಿರುವ ಸೋಮೇಶ್ವರ ವಿಗ್ರಹ ವಿಜಯನಗರೋತ್ತರ ಕಾಲದ ಅಪರೂಪದ ಪ್ರತಿಮೆ. ಕೀರ್ತಿಮುಖದ ಅಲಂಕರಣವಿರುವ ಈ ಮೂರ್ತಿ 8 ಅಡಿ ಎತ್ತರವಿದೆ. ಜಟಾಮಕುಟದಲ್ಲಿ ಸರ್ಪ ಸೂರ್ಯ ಚಂದ್ರ ಗಂಗೆಯ ಸೂಕ್ಷ್ಮ ಶಿಲ್ಪಗಳಿವೆ. ನಾಲ್ಕು ಕೈಗಳಲ್ಲಿ ಕ್ರಮವಾಗಿ ತ್ರಿಶೂಲ ಖಡ್ಗ, ಡಮರು ಮತ್ತು ಬಟ್ಟಲುಗಳಿವೆ. ಗರ್ಭಗುಡಿಯ ಮುಂಭಾಗದ ಅಂತರಾಳದಲ್ಲಿ ಭಗ್ನಗೊಂಡ ಭೈರವನ ಶಿಲ್ಪವಿದೆ. ಈ ಶಿಲ್ಪ ಸುಮಾರು 12-13ನೇ ಶತಮಾನದಾಗಿದ್ದು ಇದನ್ನು ಜನರು ಕಂಪಿಲರಾಯನ ಮೂರ್ತಿ ಎನ್ನುತ್ತಾರೆ. ಸಭಾಮಂಟಪದ ಭಿತ್ತಿಯಲ್ಲಿ ವೀರಗಲ್ಲು ಹಾಗೂ ಹೊರಭಿತ್ತಿಯಲ್ಲಿ ಹುಲಿಯೊಡನೆ ಹೋರಾಡುತ್ತಿರುವ ವೀರನ ಉಬ್ಬು ಶಿಲ್ಪಫಲಕವಿದೆ. ದೇವಸ್ಥಾನದ ಅಂತರಾಳ ಸಭಾಮಂಟಪ ಗೋಪುರ ಹೊರಗಡೆಯ ದಕ್ಷಿಣದ ಹೊರಭಿತ್ತಿ ಆಧುನೀಕರಿಸಲಾಗಿದೆ.

” ಸಕಲ ಭಕ್ತರ ಇಷ್ಟಾರ್ಥಗಳನ್ನು ಹಾಗೂ ಭಕ್ತರ ಹರಕೆಗಳನ್ನು ಈಡೇರಿಸುವ ಮೂಲಕ ಎಲ್ಲರ ಮನ – ಮನೆಗಳಲ್ಲಿ ಶ್ರೀ ಸೋಮೇಶ್ವರ ನೆಲಸಿದ್ದು, ಕಂಪ್ಲಿ ಸಿರಿದಂತೆ ಸುತ್ತಮುತ್ತ ಗ್ರಾಮಗಳ ಸದ್ಭಕ್ತರಿಗೆ ಸಂಭ್ರಮ ಮನೆಮಾಡಿದೆ “.

  • H. ನಾಗರಾಜ
    ಸದ್ಭಕ್ತರು ಹಾಗೂ ಮಾಲೀಕರು, ರವಿಕಿರಣ್ ಡೆಕೋರೇಷನ ಕಂಪ್ಲಿ,
    ಜಿಲ್ಲಾಧ್ಯಕ್ಷರು, ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ, ಬಳ್ಳಾರಿ

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ