ಯಾದಗಿರಿ/ಗುರುಮಠಕಲ್: ಇತ್ತೀಚೆಗೆ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢ ವಿಭಾಗ ಉತ್ತಮ ಸಾಧನೆ ಮಾಡಿ ಎಲ್ಲರ ಗಮನಕ್ಕೆ ಪಾತ್ರವಾಗಿದೆ.
ಶಾಲೆಯು 2024-25 ನೇ ಸಾಲಿನಲ್ಲಿ, ಉನ್ನತ ಶ್ರೇಣಿ 4, ಪ್ರಥಮ ಶ್ರೇಣಿ 23, ದ್ವಿತೀಯ ಶ್ರೇಣಿ 20, ತೃತೀಯ ಶ್ರೇಣಿ 7 ವಿಧ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಕುಮಾರಿ ಸುಜಾತ ಹಣಮಂತ 587(93.92), ಕುಮಾರಿ ಮಾನಸ ಮೋಹನ 586(93.76),
ಕುಮಾರಿ ಮೇಘನಾ ಕೃಷ್ಣಾರೆಡ್ಡಿ 579(92.64), ಕುಮಾರಿ ಕೀರ್ತನಾ ವೆಂಕಟೇಶ 536(85.76). ಶಾಲೆಯ ಸರಾಸರಿ ಫಲಿತಾಂಶ 52.94% ಬಂದಿರುತ್ತದೆ.
ಕುಮಾರಿ ಮಾನಸ ಮೋಹನ ಮತ್ತು ಕುಮಾರಿ ಮೇಘನಾ ಕೃಷ್ಣಾರೆಡ್ಡಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿದ್ದು, ಹಾಗೆಯೇ ಹಿಂದಿ ವಿಷಯದಲ್ಲಿ ಕುಮಾರಿ ಮಾನಸ ಮೋಹನ ನೂರಕ್ಕೆ ನೂರು ಅಂಕ ಪಡೆದಿರುವದು ಸಂತಸ ತಂದಿದೆ ಅವರ ಸಾಧನೆಗೆ ಅವರ ಕುಟುಂಬ ಸದಸ್ಯರು, ಶಾಲೆಯ ಎಲ್ಲಾ ಮುಖ್ಯಗುರುಗಳು ಸೇರಿದಂತೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಶರಣಪ್ಪ ಮುಖ್ಯ ಗುರುಗಳು ಪತ್ರಿಕೆಗೆ ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
