ನದಿಯಲ್ಲಿ ಕಾಲು ತೊಳೆಯಲು ಹೋಗಿ 12 ವರ್ಷದ ಮೋನಿಷಾ ಎಂಬ ಹೆಣ್ಣು ಮಗು ನೀರುಪಾಲಾದ ಘಟನೆ ಜರುಗಿದೆ.
ಮಂಡ್ಯ: ಅಕ್ಕಿಹೆಬ್ಬಾಳು ಹೋಬಳಿಯ ಸಂಗಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಸಂಗಮ ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ, ಸಂಗಮ ವಾಗುವ ಇತಿಹಾಸವುಳ್ಳ ಸ್ಥಳಕ್ಕೆ ಕೃಷ್ಣರಾಜಪೇಟೆ ಪಟ್ಟಣದ ನಿವಾಸಿ ಹಾಗೂ ಪೊಲೀಸ್ ಪೇದೆ ಧರ್ಮೇಂದ್ರ ಅವರ ಸುಪುತ್ರಿ ಮೋನಿಷಾ (12) ಎಂಬುವರು ಕುಟುಂಬಸ್ಥರ ಜೊತೆ ಸಂಗಮದಲ್ಲಿರುವ ಸಂಗಮೇಶ್ವರ ದೇವಾಲಯಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಪಕ್ಕದಲ್ಲೆ ಇದ್ದ ನದಿಯಲ್ಲಿ ಕಾಲು ತೊಳೆಯಲು ಹೋಗಿ ಜಲಸಮಾದಿಯಾಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳ ಸಿಬ್ಬಂದಿಗಳಾದ ಚಂದ್ರಶೇಖರ್, ದಿನೇಶ್, ಚಂದನ್ ಕುಮಾರ್, ಶ್ರೀಶೈಲ, ಶ್ರೀಧರ್, ಓಂಕಾರ್, ಇವರ ಎರಡು ಗಂಟೆಗಳ ಕಾರ್ಯಾಚರಣೆಯಿಂದ ಮೃತ ದೇಹ ಹೊರ ತೆಗೆಯಲಾಯಿತು.
- ಕರುನಾಡ ಕಂದ
