
ಪಂಪಿಂಗ್ ಯಂತ್ರದ ಮೂಲಕ ಬಗೆಹರಿಸಿ ಸಮಸ್ಯೆಗೆ ತಾತ್ಕಾಲಿಕ ಪರಿಷ್ಕರಣೆ ನೀಡಿದ ಪುರಸಭೆ.
” ಯುಜಿಡಿ ಅವಾಂತರ, ಸಂಚಾರ ಸಂಚಕಾರ :
ಯು.ಜಿ.ಡಿ ನಿರ್ವಹಣೆ ವೈಫಲ್ಯ- ಪುರಸಭೆ ಕಾರ್ಯಾಲಯದಿಂದ ಪ್ರತಿಬಾರಿ ಅದೇ ರಾಗ ಅದೇ ತಾಳ ” ತಲೆ ಬರಹದ ಅಡಿಯಲ್ಲಿ 4-5-2025 ರ ಭಾನುವಾರ ಕರುನಾಡ ಕಂದ ನ್ಯೂಸ್ ಪೋರ್ಟಲ್ ನಲ್ಲಿ ವರದಿ ಪ್ರಕಟವಾಗಿತ್ತು.
ಯಾದಗಿರಿ/ಗುರುಮಠಕಲ್: ಪಟ್ಟಣದ ಒಳ ಚರಂಡಿ ವ್ಯವಸ್ಥೆ ದುರಸ್ತಿ ಕುರಿತಾದ ಸುದ್ದಿ ಬಿತ್ತರಿಸಿದ ಹಿನ್ನಲೆಯಲ್ಲಿ ಇಂದು ಗುರುಮಠಕಲ್ ಪುರಸಭೆ ಕಾರ್ಯಾಲಯದಿಂದ ಪಟ್ಟಣದ ಹಲವು ಕಡೆ ಮುಚ್ಚಳ ಸೋರಿಕೆಯಾಗಿ ತ್ಯಾಜ್ಯ ಸೋರಿಕೆಯಾಗುತ್ತಿರುವ ವಾರ್ಡ್ ಸಂಖ್ಯೆ 5ರಲ್ಲಿರುವ UGD ಸೋರಿಕೆಯನ್ನು ಭಾರೀ ಪ್ರಮಾಣದ ಪಂಪಿಂಗ್ ಯಂತ್ರದ ಮೂಲಕ ಬಗೆಹರಿಸಿ ಸಮಸ್ಯೆಗೆ ತಾತ್ಕಾಲಿಕ ಪರಿಷ್ಕರಣೆ ಮಾಡಿದ್ದಾರೆ.
ಸಮಸ್ಯೆ ಬಗೆಹರಿಸಿ, ದುರ್ನಾತ ತಪ್ಪಿಸಿ ಪುರಸಭೆ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಮುಂದೆಯೂ ಸಹ ವಿಳಂಬ ತೋರದೆ ತ್ವರಿತ ಗತಿಯಲ್ಲಿ ಇದೇ ರೀತಿ ಕಾರ್ಯಚಾರಣೆ ಮಾಡಲಿ ಎಂದು ಆಶಿಸುವೆವು ಎಂದು ಮಲ್ಲಿಕಾರ್ಜುನ ಹಿರೇಮಠ್ ಸಾರ್ವಜನಿಕರ ಪರವಾಗಿ ತಮ್ಮ ಅಭಿಪ್ರಾಯ ತಿಳಿಸಿದರು.
ವರದಿ: ಜಗದೀಶ್ ಕುಮಾರ್ ಭೂಮ
