
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಮೂರ್ತಿ ಹಾಗೂ ಅಕ್ಕಮಹಾದೇವಿ ಮೂರ್ತಿಯನ್ನು ಭವ್ಯವಾಗಿ ಮೆರಣಿಯ ಮೂಲಕ ಶ್ರೀ ಮಠಕ್ಕೆ ತರಲಾಯಿತು. ಮರುದಿನ ವಿಶೇಷವಾಗಿ ಹೋಮ ಮತ್ತು ಅಭಿಷೇಕ ಮಾಡಿಸಲಾಯಿತು.
ಕೋಡ್ಲಿಯ ಮಠವನ್ನು ಪುನರ್ ನಿರ್ಮಾಣ ಮಾಡಬೇಕು ಅಂದುಕೊಂಡಾಗ ನಮ್ಮಲ್ಲಿ ಭಯ ಉಂಟಾಗಿತ್ತು. ಮಠವನ್ನು ನಾವು ಹೇಗೆ ನಿರ್ಮಾಣ ಮಾಡಬೇಕು ಅಂದುಕೊಂಡಾಗ ಶ್ರೀ ಗಳು ಒಂದು ಮಾತನ್ನು ಹೇಳುತ್ತಾರೆ ನಮ್ಮ ಹಿಂದೆ ದೇವರಿದ್ದಾನೆ ಅವನ ಮೇಲೆ ಭಾರ ಹಾಕಿರಿ ಅಂದಾಗ ಈಗ ಮಠ ನಾವು ಅಂದುಕೊಂಡಕ್ಕಿಂತ ಭವ್ಯವಾಗಿ ಮಠವು ನಿರ್ಮಾಣವಾಗಿದೆ. ಮುಖ್ಯವಾಗಿ ನಾವು ಮಕ್ಕಳಲ್ಲಿ ಭಕ್ತಿ ಭಾವ ಗುರುದೇವ ಭಕ್ತಿಯ ಬಗ್ಗೆ ತಿಳಿಸಬೇಕು ಎಂದು ಪ್ರವೀಣ್ ಕುಮಾರ್ ಪಾಟೀಲ್ ಕೋಡ್ಲಿ ರವರು ಹೇಳಿದರು.
ನಮ್ಮ ಭಾರತ ದೇಶದಲ್ಲಿ ಮಠಗಳ ಕೊಡುಗೆ ಅಪಾರವಾದ ದ್ದು. ಮಠಗಳಿಂದ ನಮ್ಮ ಜೀವನ ಬದಲಾಗುವುದರ ಜೊತೆಗೆ,ಈ ಜನ್ಮವನ್ನು ಪಡೆಯಬೇಕಾದರೆ ತಾಯಿಯ ಪುಣ್ಯದ ಫಲ ಎಂದು ಹೇಳಬಹುದು. ನಮ್ಮ ಜೀವನದಲ್ಲಿ ಯಾರೇರು ಋಣವನ್ನು ತಿರಿಸಬಹುದು, ಆದರೆ ತಾಯಿಯ ಋಣವನ್ನು ಎಷ್ಟು ಜನ ವೇತರು ತೀರಿಸಲಕ್ಕೆ ಸಾಧ್ಯವಾಗದು ಎಂದು ಮಠದ ಲೋಕಾರ್ಪಣೆ ಪುರಾಣದ ಮಹಾ ಮಂಗಲದ ಧರ್ಮಸಭೆಯ ಕಾರ್ಯಕ್ರಮದಲ್ಲಿ ರಾಜೇಶ್ ಗುತ್ತೇದಾರ್ ಜಿಪಂ ಮಾಜಿ ಸದಸ್ಯರು ರವರು ಮಾತನಾಡಿದರು.
ನಮ್ಮ ಜೀವನ, ನಮ್ಮ ಬದುಕು ಬದಲಾಗಬೇಕಾದರೆ ಗುರುವಿನ ಆಶೀರ್ವಾದದಿಂದ ಮಾತ್ರ ಸಾಧ್ಯವಾಗುತ್ತದೆ. ಗುರುವಿನ ಆಶೀರ್ವಾದ ಪಡೆಯಬೇಕಾದರೆ ನಾವುಗಳು ನಮ್ಮ ಕಾಯಕದಲ್ಲಿ ನಿಷ್ಠೆಯಿಂದ ಇದ್ದಾಗ ಮಾತ್ರ ಮತ್ತು ಅದರಲ್ಲಿ ನಮ್ಮ ಪ್ರಯತ್ನಗಳು ಇರಬೇಕಾಗುತ್ತವೆ ಎಂದು ಮಠದ ಲೋಕಾರ್ಪಣೆ, ಶ್ರೀ ರೇವಣಸಿದ್ದೇಶ್ವರ ಮೂರ್ತಿ ಹಾಗು ಅಕ್ಕಮಹಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮಹಾಪುರಾಣ ಮಂಗಲ ಧರ್ಮಸಭೆಯಲ್ಲಿ ಮ. ನಿ. ಪ್ರ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು ವಿರಕ್ತಮಠ ಭರತನೂರು ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.
ಭಾರತೀಯರ ಭವಿಷ್ಯದ ಸನಾತನ ಧರ್ಮ ಯಾರ ಕೈಯಲ್ಲಿದೆ ಅಂದಾಗ ಅದು ತಾಯಂದಿರ ಕೈಯಲ್ಲಿದೆ. ಅದರ ಜೊತೆಯಲ್ಲಿಯೇ ಸಮಾಜದಲ್ಲಿ ನಮ್ಮ ಬಾಳು ಬೆಳಗಬೇಕಾದರೆ ಒಳ್ಳೆಯ ಆಲೋಚನೆ, ಗುರು ಭಕ್ತಿ, ಸಂಸ್ಕಾರ, ಸಂಸ್ಕೃತಿ ಮತ್ತು ಗುರುವಿನವಾಣಿಯಿಂದ ನಮ್ಮ ಜೀವನ ಬೆಳಗುತ್ತದೆ. ಗುರುವಿನ ವಾಣಿಯಲ್ಲಿ ಎಂತಹ ಶಕ್ತಿ ಇದೆ ಅಂದರೆ ಜಗತ್ತಿನ ದಿಕ್ಕನ್ನು ಬದಲಾಯಿಸುವ ಶಕ್ತಿ ಇದೆ ಎಂದು ಶ್ರೀ. ಷ. ಬ್ರ. ರೇಣುಕಾ ಗಂಗಾಧರ್ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಹುಮನಾಬಾದ್ ಶ್ರೀಗಳು ಈ ಕಾರ್ಯಕ್ರಮದ ಸಮುಖ್ಯ ಸ್ಥಾನವಹಿಸಿ ಮಾತನಾಡಿದರು.
ಇಂದಿನ ಯುಗದಲ್ಲಿ ಧರ್ಮ, ಆಚಾರ ಸಂಪ್ರದಾಯ ಎಲ್ಲವನ್ನು ಬಿಟ್ಟಿದ್ದೇವೆ. ಏಕೆಂದರೆ ನಮ್ಮ ದೇಹದಲ್ಲಿ ಕೆಟ್ಟ,ಕೆಟ್ಟ ಆಲೋಚನೆಯನ್ನು ತುಂಬುತ್ತಾ ಇದ್ದೇವೆ. ಅದಕ್ಕೆ ಪುರಾಣ ಸಂತರ, ಪುಣ್ಯ ಕಥೆ, ಮಹಾತ್ಮರ ಅನುಭವ ವಾಣಿಗಳನ್ನು ನಮ್ಮ ದೇಹದಲ್ಲಿ ತುಂಬಿದಾಗ ಮಾತ್ರ ನಮ್ಮ ಬದುಕಿಗೆ ಅರ್ಥ ಸಿಗುತ್ತದೆ ಎಂದು ಶ್ರೀ ಷ. ಬ್ರ. ಬಸವಲಿಂಗ ಶಿವಾಚಾರ್ಯರು ರೇವಣಸಿದ್ದೇಶ್ವರ ಹಿರೇಮಠ ಕೋಡ್ಲಿ ಶ್ರೀಗಳು ಈ ಕಾರ್ಯಕ್ರಮದ ನೇತೃತ್ವ ವಹಿಸಿ ತಮ್ಮ ಅನುಭವದ ಮಾತುಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಮ. ನಿ. ಪ್ರ. ಚಿಕ್ಕ ಗುರು ನಂಜೇಶ್ವರ ಮಹಾಸ್ವಾಮಿಗಳು ವಿರಕ್ತ ಮಠ ಭರತನೂರ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದರು, ಶ್ರೀ ಹವಾ ಮಲ್ಲಿನಾಥ್ ಮಹಾರಾಜರು ಅಧ್ಯಕ್ಷರು ಜೈ. ಭಾ. ಸೇ. ಸಮಿತಿ ನವದೆಹಲಿ ಸಾನಿಧ್ಯ ವಹಿಸಿದರು, ಶ್ರೀ ಷ. ಬ್ರ. ಬಸವಲಿಂಗ ಶಿವಾಚಾರ್ಯರು ರೇವಣಸಿದ್ದೇಶ್ವರ ಹಿರೇಮಠ ಕೋಡ್ಲಿ ಈ ಕಾರ್ಯಕ್ರಮದ ನೇತೃತ್ವ ವಹಿಸಿದರು, ಶ್ರೀ ಷ. ಬ್ರ. ರೇಣುಕಾ ಗಂಗಾಧರ್ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಹುಮನಾಬಾದ್ ಪೂಜ್ಯರು ಅವರು ಈ ಕಾರ್ಯಕ್ರಮದ ಸಮುಖ್ಯ ಸ್ಥಾನವನ್ನು ವಹಿಸಿದರು, ಶ್ರೀ ರಾಮಲಿಂಗ ರೆಡ್ಡಿ ಬಿ ದೇಶಮುಖ ಅಧ್ಯಕ್ಷತೆ ಸ್ಥಾನವನ್ನು ವಹಿಸಿದರು, ಮುಖ್ಯ ಅತಿಥಿಗಳಾಗಿ ಡಾ ll ಅವಿನಾಶ್ ಜಾಧವ್ ಮಾನ್ಯ ಶಾಸಕರು ಚಿಂಚೋಳಿ, ರಾಜೇಶ್ ಗುತ್ತೇದಾರ್ ಜಿಲ್ಲಾ ಮಾಜಿ ಸದಸ್ಯರು, ಶರಣು ಪಾಟೀಲ್ ಮೊತಕಪಳ್ಳಿ ಅಧ್ಯಕ್ಷರು ವೀರಶೈವ ಲಿಂಗಾಯತ ಸಮಾಜ ಚಿಂಚೋಳಿ, ಮಲ್ಲಿಕಾರ್ಜುನ್ ಸಪೈಯಗೋಳ್ ಕಾರ್ಯದರ್ಶಿ ವೀರಶೈವ ಸಮಾಜ ಕೋಡ್ಲಿ, ಮಲ್ಲಿನಾಥ್ ಕೊಲಕುಂದಿ ಬಿಜೆಪಿ ಮುಖಂಡರು ಕೋಡ್ಲಿ, ಪ್ರವೀಣ್ ಕುಮಾರ್ ಪಾಟೀಲ್, ಗುಂಡಪ್ಪ ಮಾಳಗಿ ಮಾಜಿ ತಾಪಂ ಸದಸ್ಯರು ಮಹಾಂತೇಶ್ ಸ್ವಾಮಿಗಳು, ಸಿದ್ದರಾಮಯ್ಯ ಸಪೈಯಗೋಳ ಮತ್ತು ವೀರಶೈವ ಸಮಾಜದ ಮುಖಂಡರು, ಮಹಿಳೆಯರು, ಕೋಡ್ಲಿ ಗ್ರಾಮದ ಸರ್ವ ಬಳಗದವರು ಹಾಗೂ ಇತರರು ಭಾಗವಹಿಸಿದರು.
ವಿಶೇಷವಾಗಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕವನ್ನು ಪಡೆದು ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆ ಕೋಡ್ಲಿ ಮತ್ತು ನಮ್ಮೂರಿನ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಠದ ವತಿಯಿಂದ ಹಾಗೂ ಕೋಡ್ಲಿ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು. ಮತ್ತು ಮಾಡಲಿಂಗನಲ್ಲಿ ಕರ್ನಾಟಕ ರಾಜ್ಯ ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ರಾಮ್ ಕುಮಾರ್ ತಂದೆ ಮಲ್ಲಿನಾಥ್ ಕೋಲಕುಂದಿ ರವರು ಇಂಟರ್ ನ್ಯಾಷನಲ ಮಾಡೇಲ್ ನಲ್ಲಿ ಹೆಸರು ವಾಸಿ ಮಾಡಿದ್ದಾರೆ. ಇವರಿಗೆ ಕೋಡ್ಲಿ ಶ್ರೀ ರೇವಣಸಿದ್ದೇಶ್ವರ ಹಿರೇಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಶಿವಕುಮಾರ್ ಸುಲೇಪೇಟ್ ನಿರೂಪಣೆ ಮಾಡಿದರು. ಮಲ್ಲಿನಾಥ್ ಕೋಲಕುಂದಿ ಸ್ವಾಗತಿಸಿದರು, ಶ್ರೀಕಾಂತ್ ತಾಂಡೂರ್ ವಂದಿಸಿದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್
