ಬಳ್ಳಾರಿ/ ಕಂಪ್ಲಿ : ಪಟ್ಟಣದ ಶ್ರೀ ನಿಮಿಶಾಂಭಾ ದೇವಿ ಜಯಂತೋತ್ಸವ ಅಂಗವಾಗಿ ಗಂಗೆ ಸ್ಥಳ ಮೆರವಣಿಗೆ ಜರುಗಿತು.
ಇಲ್ಲಿನ ದೇವಾಲಯದಕ್ಕೆ ಅನೇಕ ಭಕ್ತರು ಭೇಟಿ ನೀಡುವ ದೇವಾಲಯಗಳಲ್ಲಿ ನಿಮಿಷಾಂಭ ದೇವಿ ದೇವಾಲಯವೂ ಒಂದಾಗಿದೆ. ಭಕ್ತರ ಸಕಲ ಸಂಕಷ್ಟಗಳನ್ನು ಪರಿಹರಿಸುತ್ತವೆ ಎನ್ನುವ ನಂಬಿಕೆಯಿದೆ.
ಪಟ್ಟಣದಲ್ಲಿ ಎಣಿಕೆಗೂ ಮೀರಿದಷ್ಟು ದೇವಾಲಯಗಳಿದ್ದರೂ ಪ್ರಸಿದ್ಧ ದೇವಾಲಯಗಳಲ್ಲಿ ನಿಮಿಷಾಂಭ ದೇವಾಲಯವೂ ಒಂದಾಗಿದೆ. ಈ ದೇವಸ್ಥಾನದ ಜಯಂತೋತ್ಸವದ ಅಂಗವಾಗಿ ಗಂಗೆ ಸ್ಥಳ ಮೆರವಣಿಗೆ ಸಕಲ ಮಂಗಳವಾದ್ಯಗಳೊಂದಿಗೆ ಜರುಗಿತು.
ಈ ಸಂದರ್ಭದಲ್ಲಿ ಸೂರ್ಯವಂಶ ಆರ್ಯ ಕ್ಷತ್ರಿಯ ( ಚಿತ್ರಗಾರ ) ಸಮಾಜದ ಬಾಂಧವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
