ಬಳ್ಳಾರಿ / ಸಂಡೂರು : ಬದುಕು ಶಾಶ್ವತವಲ್ಲ ಕೆಲಸ ಶಾಶ್ವತ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಅಭಿಪ್ರಾಯ ವ್ಯಕ್ತಪಡಿಸಿದರು. ತಹಶೀಲ್ದಾರ್ ಕಚೇರಿಯಲ್ಲಿ ಏರ್ಪಡಿಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ ಸಾರ್ವಜನಿಕವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ ಈಗಲೂ ಮುಂದೆಯೂ ಕೂಡಾ ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸವನ್ನೇ ಮಾಡುತ್ತೇನೆ ಎಂದು ತಿಳಿಸಿದರು.
ದರೋಜಿ ಗ್ರಾಮದ 17 ಎಕರೆಯನ್ನು ಉಳಿಸಿಕೊಳ್ಳುವ ಮನವಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಸರ್ಕಾರಿ ಜಾಗ ಇದ್ದಲ್ಲಿ ಶಾಲಾ ಕಾಲೇಜು ಅಂಗನವಾಡಿ ಆಸ್ಪತ್ರೆ ಜನರಿಗೆ ಉಪಯೋಗವಾಗುವ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಕಾಟನ್ ಕಂಬ ಬಳಿ ವಿಂಡ್ ಫ್ಯಾನುಗಳನ್ನು ಹೊತ್ತ ಬೃಹತ್ ಗಾತ್ರದ ಲಾರಿಗಳು ರಸ್ತೆಯಲ್ಲಿ ಚಲಿಸಿರುವುದರಿಂದ ರಸ್ತೆಗಳು ತುಂಬಾ ಹಾಳಾಗಿವೆ ಎಂಬ ದೂರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಅವರಿಗೆ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು.
ಸುಶೀಲ ನಗರದಲ್ಲಿ ರೈಲ್ವೆ ಯಾರ್ಡ್, ಗ್ರಂಥಾಲಯ, ಓಪನ್ ಏರ್ ಜಿಮ್, ನಿವೇಶನಕ್ಕೆ ಬೇಕಾದ ಸರಕಾರಿ ಜಾಗವನ್ನು ಗುರುತಿಸುವಂತೆ ಸೂಚಿಸಿದರು.
ಡಿ.ಸಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ ತಾಲೂಕಿನ 10 ಗ್ರಾಮಗಳಲ್ಲಿ ಸರ್ವೆ ಮಾಡುವಾಗ ಬ ಖರಾಬು ಎಂದು ಪಹಣಿಯಲ್ಲಿ ನಮೊದಾಗಿದೆ. ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ ಎಸ್. ಲಾಡ್ ಹಾಗೂ ಸಂಸದರೊಂದಿಗೆ ಚರ್ಚಿಸಿದ್ದು ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಸರ್ಕಾರದ ನಿವೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಸಂಡೂರು, ಕುರೆಕೊಪ್ಪ ಹಾಗೂ ಕುಡುತಿನಿ ಸ್ಥಳೀಯ ಸಂಸ್ಥೆಗಳಲ್ಲಿ ಬಿ ಖಾತೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಒಟ್ಟಾರೆಯಾಗಿ 15 ಆಹವಾಲುಗಳು ಸಲ್ಲಿಕೆಯಾದವು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಮಹಮದ್ ಹ್ಯಾರಿಸ್ ಸುಮೈರ್ , ಎಸಿ ಪ್ರಮೋದ, ಡಿವೈಎಸ್ಪಿ ಪ್ರಸಾದ್ ಗೋಖಲೆ, ಸಿಪಿಐ ಮಹೇಶ್ ಗೌಡ, ಪಿಎಸ್ಐ ವೀರೇಶ್ ಮಳಶೆಟ್ಟಿ, ಸಂಡೂರು ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಕುರಕುಪ್ಪ ಪುರಸಭೆ ಅಧ್ಯಕ್ಷ ಕಲ್ಗುಡ್ಡಪ್ಪ, ತಹಶೀಲ್ದಾರ್ ಅನಿಲ್ ಕುಮಾರ, ತಾಲೂಕು ಪಂಚಾಯತ್ ಇಓ ಮಡಗಿನ ಬಸಪ್ಪ, ಇದ್ದರು. ಇಸಿಒ ಮಂಜುನಾಥ ಹಾದಿಮನಿ ನಿರ್ವಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್
