ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭೌದ್ಧಿಕತೆ ಜೊತೆಗೆ ಶ್ರಮದಾನ ಬಹಳ ಮುಖ್ಯ: ಪ್ರೊ. ಅಲ್ಲಮ ಪ್ರಭು ಬೆಟ್ಟದೂರು

ಕೊಪ್ಪಳ : ಭೌದ್ಧಿಕತೆ ಜೊತೆಗೆ ಶ್ರಮದಾನ ಕೂಡ ಬಹಳ ಮುಖ್ಯ ಎಂದು ಸಾಹಿತಿ ಪ್ರೊ. ಅಲ್ಲಮ ಪ್ರಭು ಬೆಟ್ಟದೂರು ಅವರು ಹೇಳಿದರು.
ತಾಲ್ಲೂಕಿನ ಲೇಬಗೇರಿ ಗ್ರಾಮದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟಸಿ ಮಾತನಾಡಿ ಶ್ರಮದಾನ ಜೀವನದ ಬೆಲೆ ತಿಳಿದುಕೊಳ್ಳಬೇಕು, ಎಲ್ಲರೂ ಶ್ರಮ ಪಟ್ಟರೆ ದೇಹಕ್ಕೆ ಒಳ್ಳೆಯದು. ಶ್ರಮದಾನ ಮಾಡುವುದರಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. ನಮ್ಮ ದೇಶ ವಿವಿಧತೆಯಿಂದ ಕೂಡಿದ್ದು. ವಿವಿಧ ಆಹಾರ ಪದ್ಧತಿ. ವಿವಿಧ ಸಂಸ್ಕೃತಿ, ವಿವಿಧ ಭಾಷೆ ಇದೆ. ಕನ್ನಡ ಸಾಹಿತ್ಯದಲ್ಲಿ ಪ್ರಾಚಿನ ಕಾಲದಿಂದ, ಕವಿರಾಜ ಮಾರ್ಗ ದಿಂದ ಪಂಪ, ರನ್ನ, ಲಕ್ಮಿಶ, ಚಾಮರಸ ಇವರೆಲ್ಲರೂ ನಮ್ಮ ಉತ್ತರ ಕರ್ನಾಟಕದವರು ಗಂಡುಗಲಿ ಕುಮಾರ ರಾಮ ಈ ನಮ್ಮ ಭಾಗದವರು. ಈ ಭಾಗಕ್ಕೆ ಒಳ್ಳೆಯ ಸಂಸ್ಕೃತಿಯ ಶ್ರೀ ಮಂತಿಕೆಯಿದೆ, ಮಾತನಾಡುವ ಭಾಷೆ ಮತ್ತು ಗ್ರಾಮೀಣ ಭಾಷೆಗೆ ವ್ಯತ್ಯಾಸವಿದೆ. ನಮ್ಮ ಭಾಗದ ಅನುಭವ ಮಂಟಪ ಇಂದಿನ ಸಂಸತ್ತಿನ ಪ್ರತೀಕವಾಗಿದೆ. ನಮ್ಮ ಹಳ್ಳಿಗಳ ಸ್ಥಿತಿ
ಬಹಳ ಕಷ್ಟವಿದೆ, ಜನಪ್ರತಿನಿದಿಗಳು ಮನಸ್ಸು ಮಾಡಿದರೆ ಮತ್ತು ಇಚ್ಚಾ ಶಕ್ತಿ ಇದ್ದರೆ ಒಳ್ಳೆಯ ಕೆಲಸ ಮಾಡಬಹುದು ನಾವು ಜನರ ಜೊತೆ ಬೆರೆಯಬೇಕು ಜನರು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಲ್ಲರೂ ಸರಳ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಬಿ. ಜಿ. ಕರಿಗಾರ ಅವರು ಮಾತನಾಡುತ್ತಾ ಸರಕಾರ ಬಹಳ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ, ಇದರ ಜೊತೆಗೆ ನಾವು ಕೂಡಾ ಕೈ ಜೋಡಿಸಬೇಕು ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು. ನೀವು ಸ್ವಚ್ಛ ಮಾಡುವುದರ ಜೊತೆಗೆ ಜನರಿಗೆ ಅರಿವು ಮೂಡಿಸಬೇಕು ನಮ್ಮ ಸುತ್ತ ಮುತ್ತ ಪರಿಸರ ಕೂಡಾ ಸ್ವಚ್ಛ ಇರಬೇಕು ಎಂದರು.
ಲೇಬಗೇರಿ ಗ್ರಾಮ ಪಂಚಾಯತ್ ಸದಸ್ಯ ಫಾಕಿರಗೌಡ ಅವರು ಮಾತನಾಡುತ್ತ ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಲ್ಪಿಗಳನ್ನಾಗಿ ಮಾಡುತ್ತಾರೆ. ನೀವು ನಿಮ್ಮ ತಂದೆ ತಾಯಿ ಕಷ್ಟ ಗಳನ್ನು ಅರ್ಥ ಮಾಡಿಕೊಂಡು ಓದಬೇಕು. ನೀವು ದಿಟ್ಟ ಮಹಿಳೆಯರು ಆಗಬೇಕು.ಪ್ರತಿಯೊಬ್ಬ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆ ಗಳನ್ನು ಇಟ್ಟುಕೊಲಬೇಕು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಗಣಪತಿ ಲಮಾಣಿಯವರು ಮಾತನಾಡುತ್ತ ವಿವಿಧ ಗ್ರಾಮಗಳಲ್ಲಿ ಎನ್. ಎಸ್. ಎಸ್ ಶಿಬಿರಗಳ ಮೂಲಕ ಜನರು ಸ್ವಚ್ಛತೆ ಅರಿವು ಬರುತ್ತದೆ. ಮಹಿಳೆಯರಿಗೆ ಶಿಕ್ಷಣ ಅಗತ್ಯ ಇದೆ. ಈ ರೀತಿಯ ಶಿಬಿರಗಳ ಮೂಲಕ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಬೇಕು. ಸಹಕಾರದ ಮೂಲವೇ ಹಳ್ಳಿಗಳು. ಹಳ್ಳಿಗಳು ತಮಗೆ ಏನು ಬೇಕು ಅದನ್ನು ತಾವೇ ಪಡೆದುಕೊಳ್ಳತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಲೇಬಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ನಿರೂಪಿಸಿದರು, ಹಂಪಮ್ಮ ಸ್ವಾಗತಿಸಿದರು ಮತ್ತು ವಿಜಯಲಕ್ಷ್ಮಿ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ