
ಬಳ್ಳಾರಿ / ಕಂಪ್ಲಿ : ಇದೇ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ಆಪರೇಷನ್ ಸಿಂಧೂರ ಎನ್ನುವ ಹೆಸರಿನಡಿಯಲ್ಲಿ ಪ್ರತ್ಯುತ್ತರ ನೀಡಿದೆ, ಭಾರತದ ಹೆಮ್ಮೆಯ ಸೇನಾ ಕಾರ್ಯಾಚರಣೆಗೆ ಇನ್ನಷ್ಟು ಸ್ಥೈರ್ಯ ತುಂಬಲು ಮಾನ್ಯ ಸಚಿವರು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಝಡ್. ಜಮೀರ್ ಅಹಮದ್ ಖಾನ್ ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಸಂದೇಶ ನೀಡಿದ್ದಾರೆ.
ಭಾರತದ ಹೆಮ್ಮೆಯ ಸೇನಾ ಕಾರ್ಯಾಚರಣೆಗೆ ಇನ್ನಷ್ಟು ಸ್ಥೈರ್ಯ ತುಂಬಲು ಪಟ್ಟಣದ ಎಲ್ಲಾ ಪ್ರಾರ್ಥನಾ (ಜುಮ್ಮಾ) ಮಸೀದಿಗಳಲ್ಲಿ ಶುಕ್ರವಾರ ನಿನ್ನೆ ಭಾರತೀಯ ಸಶಸ್ತ್ರ ಪಡೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಗೆ ಕೃತಜ್ಞತೆ ಸಲ್ಲಿಸಲು, ಭಾರತೀಯ ಸೇನೆಗೆ ಒಳಿತಾಗಲಿ, ಸೇನೆಯ ಯೋಧರಿಗೆ ಮತ್ತಷ್ಟು ಶಕ್ತಿಗಾಗಿ ಮತ್ತು ಅವರ ಸುರಕ್ಷತೆಗಾಗಿ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಖದೀಮ್ ಜಾಮಿಯಾ ಮಸೀದಿ ( ಬೆಳಗೋಡ ಅಗಸಿ) ನಡೆದ ಪ್ರಾರ್ಥನೆಯಲ್ಲಿ ಧರ್ಮ ಗುರುಗಳಾದ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಸೈಯದ್ ಮೆನುದ್ದೀನ್ ಖಾದ್ರಿ, ಸೈಯ್ಯದ್ ಉಮೇಶ್ ಸಾಹೇಬ್ ಖಾದ್ರಿ,ಖದೀಮ್ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಎಂ. ಅರ್ಷದ್, ಎಂ ಮೆಹಮೂದ್ ಸಾಬ್, ಕೆ. ವಾಹಿದ. ಎಂ. ಶಬ್ಬೀರ, ಸೈಯದ್ ಉಸ್ಮಾನ್, ಬಿ. ಜಾಫರ್, ಎಂ.ಇಸ್ಮಾಯಿಲ್ ಬೇಗ್, ಮೆಹಬೂಬ್ ಸಾಬ್, ಬಿ. ಜಾಫರ್ ಸೇರಿದಂತೆ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
