
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಅಂಬಿಕಾಪುರ ಗ್ರಾಮದಲ್ಲಿ ನೂತನ ಪೆಟ್ರೋಲ್ ಬಂಕ್ ಚಾಲನೆ ನೀಡಿ ಶುಭ ಹಾರೈಸಿ
ನಂತರ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ಈ ಭಾಗದಲ್ಲಿ ರಾಮಾಪುರ ಬಿಟ್ಟರೆ ಈ ಮಾರ್ಗದಲ್ಲಿ ಹನೂರು ತನಕ ಯಾವುದೇ ಪೆಟ್ರೋಲ್ ಬಂಕ್ ಇರಲಿಲ್ಲ ಈ ನೂತನ ಪೆಟ್ರೋಲ್ ಬಂಕ್ ಈ ಭಾಗದ ಪ್ರಯಾಣಿಕರಿಗೆ ಅನುಕೂಲಕರವಾಗಿದೆ ರಾಮಾಪುರದಿಂದ ಹನೂರಿಗೆ ಬರುವಂತಹ ಹಾಗೂ ಹನೂರಿಂದ ರಾಮಾಪುರಕ್ಕೆ ಹೋಗುವ ಪ್ರಯಾಣಿಕರಿಗೆ ಮಾರ್ಗ ಮಧ್ಯದಲ್ಲಿ ಇಂಧನ ಖಾಲಿವಾದರೆ ತಮ್ಮ ತಮ್ಮ ಊರುಗಳಿಗೆ ತಲುಪುವುದು ಕಷ್ಟ ಆಗುತ್ತಿತ್ತು ಆದರೆ ನೂತನ ಪೆಟ್ರೋಲ್ ಬಂಕ್ ನಿರ್ಮಾಣವಾಗಿ ಉದ್ಘಾಟನೆ ಆಗಿರುವುದು ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ ಹಾಗೆಯೇ ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ಪೆಟ್ರೋಲ್ ಬಂಕ್ ಮಾಲೀಕರಾದ ಶಿವಶಂಕರ್ ಅವರು ಈ ಕ್ಷೇತ್ರದ ಶಾಸಕರು ಶ್ರೀ ಎಂ ಆರ್ ಮಂಜುನಾಥ್ ನಮ್ಮ ಪೆಟ್ರೋಲ್ ಬಂಕ್ ಕಟ್ಟಡ ಉದ್ಘಾಟನೆ ಮಾಡಿ ಚಾಲನೆ ನೀಡಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಮಾಲೀಕರಾದ ಶಿವಶಂಕರ್, ರಾಧಾ, ಪಚ್ಚೇಗೌಡ, ವೆಂಕಟೇಗೌಡ, ಸಿಂಧೂರ, ಲಿಯಾನ್ಸ, ಸುಷ್ಮಾ, ಸುನೀಲ್ ಕುಮಾರ್, ಮೋಕ್ಷಿತ್, ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ :ಉಸ್ಮಾನ್ ಖಾನ್
