ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಾದ- ಲಯ -ಲಾಸ್ಯದ ಅನುಭವ ಬದುಕಿಗೆ ಅಗತ್ಯ – ಲಕ್ಷ್ಮಿಕಾಂತ್ ಹೆಗಡೆ

ಬೆಂಗಳೂರು: ನಮ್ಮ ದೇಶದಲ್ಲಿ ಕಲೆಯೆಂದರೆ, ಸಂಸ್ಕೃತಿ, ಅದು ಮನೋರಂಜನೆಯಲ್ಲ ನಾದದೊಂದಿಗೆ ಬಂದು ಲಯದೊಂದಿಗೆ ಸೇರೀದಾಗ ಸಂಗೀತವಾಗುತ್ತದೆ; ನಮ್ಮೊಳಗೂ ನಾದ-ಲಯ-ಲಾಸ್ಯವಿದೆ; ಅದರ ಅನುಭವದಿಂದ ಸಿಗುವ ಹೃದಯದ ಪರಿಪಾಕ ಬದುಕಿಗೆ ಅಗತ್ಯ; ಎಲ್ಲಾ ಕಲೆಯಲ್ಲೂ ದಿವ್ಯತೆಯ ಅಂಶವಿದೆ; ಶಿವನ ಕೈಯಲ್ಲಿ ತ್ರಿಶೂಲ, ಸರಸ್ವತಿಯ ಕೈಯಲ್ಲಿ ವೀಣೆ, ಶ್ರೀ ಕೃಷ್ಣನ ಕೈಯಲ್ಲಿ ವೇಣು ವಿಜೃಂಭಿಸುತ್ತಿದೆ; ಹೀಗೆ ಎಲ್ಲಾ ದೇವತೆಗಳ ಕೈಯಲ್ಲಿ ಒಂದೊಂದು ಸಂಗೀತ ಉಪಕರಣವನ್ನು ಕೊಡಲಾಗಿದೆ; ಅವು ಹೇಗೆ ನಾದ- ಲಯದೊಂದಿಗೆ ಮೇಳೈಸುತ್ತಿದೆ ಎಂಬುದನ್ನು ಬಹುಭಾಷಾ ತಜ್ಞ, ಚಿಂತಕ ಎಲ್ ಎಸ್ ಹೆಗಡೆ ಅವರು ಮನೋಜ್ಞವಾಗಿ ವಿವರಿಸಿದರು. ಅವರು ನಿನ್ನೆ ಬೆಂಗಳೂರಿನ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಉಪನ್ಯಾಸ ನೀಡುತ್ತಿದ್ದರು. ಮುಂದುವರೆದು, ದೇವರಲ್ಲಿರುವ ದೈವತ್ವವನ್ನು ಮನುಷ್ಯ ನೋಡುತ್ತಾನೆ. ಯಾವಾಗ ಆ ಮನುಷ್ಯನಲ್ಲಿ ದೈವತ್ವದೊಡನೆ ಶ್ರುತಿ ಮೂಡುತ್ತದೆಯೋ ಆಗ ಆತ ಬದುಕುವ ಕಲೆ ಕಲಿಯಬಲ್ಲ.
ಬದುಕು ಇರುವುದು ದೈವತ್ವದೊಡನೆ ಸಮೀಕರಿಸಿಕೊಳ್ಳಲು, ಹಾಗಾಗಲು ಕಲೆಯ ಅಗತ್ಯವಿದೆ. ಎಲ್ಲೆಲ್ಲಿ ಹೃದಯ ಭಾವುಕವಾಗಿ ಬಾಗುತ್ತದೆಯೋ ಅಲ್ಲಿ ಬದುಕಿಗೆ ಉತ್ತಮ ಸಂಸ್ಕಾರವಾಗುತ್ತದೆ ಎಂದು ಬದುಕು -ಕಲೆ- ನಾದ -ಲಯ ಇವೆಲ್ಲವುಗಳ ಕುರಿತು ಪಾಂಡಿತ್ಯಪೂರ್ಣ ಉಪನ್ಯಾಸ ನೀಡಿದರು.
ಅದಕ್ಕೂ ಮೊದಲು ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಕೀಲ ಮನು ಹೆಗಡೆ ಪುಟ್ಟನಮನೆ, ಶಿರಸಿ ಅವರು ರಾಗ್ ಭಿಬಾಸ್ ಹಾಗೂ ಬೃಂದಾವನಿ ಸಾರಂಗ್ ರಾಗದಲ್ಲಿ ಛೋಟಾ ಖ್ಯಾಲ್ ಒಂದನ್ನು ಪ್ರಸ್ತುತಪಡಿಸಿ, ಕನ್ನಡ ಹಾಗೂ ಹಿಂದಿ ಭಜನ್ ಹಾಡಿದರು ಅವರ ಸ್ವರ ಮಾಧುರ್ಯ, ಲಯತಾನ್ ಗಳಿಗೆ ಸಭಿಕರು ತಲೆದೂಗಿದರು. ಅವರಿಗೆ ತಬಲಾದಲ್ಲಿ ರೂಪಕ್ ವೈದ್ಯ, ಹಾರ್ಮೋನಿಯಂ ನಲ್ಲಿ ವಿಘ್ನೇಶ್ ಭಾಗವತ್ ಹಾಗೂ ಮಂಜಿರಾದಲ್ಲಿ ರಚಿತ್ ಹೆಗಡೆ ಅತ್ಯುತ್ತಮ ಸಾಥ್ ನೀಡಿದರು.
ನಂತರ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಡಾ. ಪೂಜಾ ಲೋಕೇಶ್ ಹುಬ್ಬಳ್ಳಿ ಅವರ ಶುದ್ಧ, ಆಕರ್ಷಕ ಅಂಗೀಕಾಭಿನಯ, ಹಸ್ತ ಮುದ್ರಿಕೆಗಳ ಸೊಗಸು, ಹದವರಿತ ತಾಳ-ಲಯ ಜ್ಞಾನಗಳು, ಅವರ ಹೆಜ್ಜೆ ಗೆಜ್ಜೆಗೆ ಬಲ ನೀಡಿತ್ತು. ಹೃದಯಸ್ಪರ್ಶಿ ಅಭಿನಯದ ಭರತನಾಟ್ಯ ಸಭಿಕರ ಹರ್ಷೋದ್ಗಾರಕ್ಕೆ ಕಾರಣವಾಯಿತು.
ಅಮರಾ ಕಾವ್ಯನಾಮದ ಖ್ಯಾತಿಯ ಅಣೆಕಟ್ಟೆ ಮಧುಸೂದನ್ ರಾವ್ ಅವರ ಪ್ರಾರ್ಥನೆ, ಕಾಶಿನಾಥ್ ಹಂದ್ರಾಳ್ ಅವರ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು, ರಾಜೇಶ್ವರಿ ಹಾಸ್ಯಗಾರ ಅವರು ಎಲ್ಲರನ್ನೂ ಸ್ವಾಗತಿಸಿ, ಪ್ರಸ್ತಾವನೆ ಮಾಡಿ ಅಚ್ಚುಕಟ್ಟಾಗಿ ನಿರೂಪಿಸಿದರು. ಪ್ರಕಾಶಕಿ ವಿಶಾಲಾಕ್ಷಿ ಶರ್ಮ ಪರಿಸರ ಪಾಠ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು ಹಾಗೂ ಕಲಾವಿದರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾದಂಬರಿಗಾರ್ತಿ ಶೋಭಾ ಹೆಗಡೆ, ಕವಿಗಳಾದ ಸಿದ್ದಣ್ಣ ಸೊನ್ನದ, ಪ್ರಭಾಕರ್ ಗಂಗೊಳ್ಳಿ, ಜಿ ವಿ ಹೆಗಡೆ, ನಿತೀಶ ಭಟ್ಟ, ಸಂಘದ ಸದಸ್ಯರುಗಳಾದ ಚರಣ್ ಕುಮಾರ್, ಬಿ ಸತ್ಯನಾರಾಯಣ, ಉಲಿಗೆಸ್ವಾಮಿ, ನಿವೃತ್ತ ಮುಖ್ಯ ಇಂಜಿನಿಯರ್ ನಂಜುಂಡಸ್ವಾಮಿ, ಎಲ್ ಎನ್ ಹೆಗಡೆ, ವಿನಯ್ ಕೂರ್ಸೆ, ಎಚ್ ಎಸ್ ವೆಂಕಟಗಿರಿ, ಎಸ್ ಎಸ್ ಹಿರೇಮಠ, ಚಿನ್ಮಯ ಹೆಗಡೆ, ರತ್ನಾಕರ ಹೆಗಡೆ, ಪ್ರಕಾಶ್ ಪೂರ್ಣಮಠ, ಎಸ್‌ ಪಿ ಸುರೇಶ್, ಗೀತಾ ಸಭಾಹಿತ, ಗಂಗಾ ಹೆಗಡೆ ಸಂಪತ್ ಕುಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಕೊಡಕ್ಕಲ್ ಶಿವಪ್ರಸಾದ, ಶಿವಮೊಗ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ