ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಮುಖ್ಯ ರಸ್ತೆ ಎರಡೂವರೆ ದಶಕಗಳಿಂದ (25) ವರ್ಷಗಳ ನಂತರ ಬಂಡಳ್ಳಿ ಮಣಗಳ್ಳಿ ಹನೂರು ಪಟ್ಟಣದ ಮುಖ್ಯ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು ರಸ್ತೆಯಲ್ಲಿ ಸಂಚರಿಸುವುದೇ ಈ ಭಾಗದ ಜನತೆಯೇ ಕಷ್ಟಕರದ ಹಲವಾರು ವರ್ಷಗಳ ಬಹು ಬೇಡಿಕೆಯ ನಂತರ ಸಾರ್ವಜನಿಕರ ಮತ್ತು ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಒತ್ತು ನೀಡುವ ಸದುದ್ದೇಶದಿಂದ ಅನುದಾನ ತಂದು ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.
ನಂತರ ಮಾತನಾಡಿದ ಅವರು
ಅಂತರಾಜ್ಯ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಹನೂರು ಪಟ್ಟಣದಿಂದ ನಾಲ್ ರೋಡ್ ಮಾರ್ಗವಾಗಿ ರಾಮಾಪುರ ಸೇರಿದಂತೆ ತಮಿಳುನಾಡಿಗೆ ದಿನನಿತ್ಯ ನೂರಾರು ವಾಹನಗಳು ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತಿರುವುದರಿಂದ ದಿಂಬಂ ರಸ್ತೆಯಲ್ಲಿ ವಾಹನಗಳಿಗೆ ನಿಷೇಧ ಏರಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ದಿನನಿತ್ಯ ರಾತ್ರಿ ಹಗಲು ಎನ್ನದೆ ವಾಹನಗಳು ಸಂಚರಿಸುತ್ತಿರುವುದರಿಂದ ತೀವ್ರವಾಗಿ ಹದಗೆಟ್ಟಿರುವ ರಸ್ತೆ ಅಭಿವೃದ್ಧಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಈ ರಸ್ತೆಯನ್ನು ಅಂತರ್ ರಾಜ್ಯ ರಸ್ತೆಯನ್ನಾಗಿ ಪರಿವರ್ತಿಸಿ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರದ ಗಮನಕ್ಕೆ ತಂದು ಸುಸರ್ಜಿತವಾದ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.
ಹನೂರಿನಿಂದ ರಾಮಪುರ ಮಾರ್ಗವಾಗಿ ಕೌದಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೂ ಸಹ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.
ದೊಡ್ಡಿಂದುವಾಡಿ ಕೊತ್ತನೂರು,ಬಂಡಳ್ಳಿ, ಹನೂರು, ಕೌದಲ್ಲಿ ಗ್ರಾಮಸ್ಥರಿಂದ ಶಾಸಕರಿಗೆ ಸನ್ಮಾನ :
ಬಂಡಳ್ಳಿ ರಸ್ತೆ ಅಭಿವೃದ್ಧಿಗೆ ಶಾಸಕರ ಹೆಚ್ಚಿನ ಅನುದಾನ ನೀಡುವ ಮೂಲಕ ಸುಸಜ್ಜಿತವಾದ ರಸ್ತೆಯನ್ನು 25 ವರ್ಷಗಳ ನಂತರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಗ್ರಾಮಸ್ಥರು ಶಾಸಕ ಎಂಆರ್ ಮಂಜುನಾಥ್ ಅವರಿಗೆ ಸನ್ಮಾನಿಸಿ ಗೌರವಿಸಿ ನಂತರ ಉಳಿದ ರಸ್ತೆಗಳಿಗೂ ಸಹ ಅಭಿವೃದ್ಧಿ ಕಾಮಗಾರಿಗೆ ಮತ್ತು ನೀಡುವಂತೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎ. ಇ. ಇ ಪುರುಷೋತ್ತಮ್ ಚಿನ್ನಣ್ಣ ಸುರೇಂದ್ರ ಹಾಗೂ ವಿವಿಧ ಗ್ರಾಮದ ಜೆಡಿಎಸ್ ಮುಖಂಡರುಗಳಾದ ಶಾಗ್ಯ ರವಿ, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ , ಉದ್ದನೂರು ಪ್ರಸಾದ್ ಚಮುಲ್ ನಿರ್ದೇಶಕ, ಜಸೀಮ್ ಪಾಷಾ, ಅತಿಕ್, ರಾಹೀಲ್ ಬೇಗ್, ಅಬ್ದುಲ್ ಖಾಲಿದ್, ಸಮೀಉಲ್ಲ, ರಖೀಬ್, ಶಾಗ್ಯಾ ಬಾಬು ಸೇರಿದಂತೆ ಇನ್ನಿತರರು ಇದ್ದರು.
ವರದಿ: ಉಸ್ಮಾನ್ ಖಾನ್
