ಗದಗ ಜಿಲ್ಲೆ ರೋಣ ತಾಲೂಕು ಸವಡಿ ಗ್ರಾಮದ ದಲಿತ ಯುವತಿ ಅಕ್ಷತಾ ಹುನಸಿಮರದ, ಮೇಲ್ಜಾತಿಯ ಗಾಣಿಗ ಸಮುದಾಯಕ್ಕೆ ಸೇರಿದ ಮಂಜುನಾಥ್ ಈರಪ್ಪ ಕಟಗಿ ಎಂಬ ಯುವಕನ ಜೊತೆ ಇವರಿಬ್ಬರೂ ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿರುತ್ತಾರೆ ಪ್ರೀತಿಸಿ ಮದುವೆ ಆದ ದಲಿತ ಸಮುದಾಯದ ಅಕ್ಷತಾ ಮತ್ತು ಮೇಲ್ಜಾತಿಯ ಸಮುದಾಯದ ಮಂಜುನಾಥ ಇವರು 2 ಹೆಣ್ಣು ಮಕ್ಕಳೊಂದಿಗೆ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ ಅಕ್ಷತಾಳ ಗಂಡ ಟ್ರ್ಯಾಕ್ಟರ್ ಡ್ರೈವರ್ ನಾಗಿ ಜೀವನ ಸಾಗಿಸುತ್ತಿರುತ್ತಾನೆ.
ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಗಾಣಿಗ ಸಮುದಾಯದ ಮಂಜುನಾಥನ ಸಮುದಾಯದವರು ದಿ. 14/05/2025 ಬುಧವಾರರಂದು ಚಿಕ್ಕಮನ್ನೂರು ಗ್ರಾಮದಲ್ಲಿ ಇರುವ ರಾಜುಗೌಡ ಪಾಟೀಲ್ ಪೆಟ್ರೋಲ್ ಪಂಪ್ ಗೆ ಮಧ್ಯಾಹ್ನ 12.30 ಸುಮಾರಿಗೆ ರಾಜೂಗೌಡ ಪಾಟೀಲ್, ತಿಪ್ಪನಗೌಡ ಹುಲ್ಲೂರು, ವೀರನಗೌಡ ಬಂಗ್ಲಿ, ಪುಲಿಕೇಶಗೌಡ ಬಂಗ್ಲಿ, ಗೌಡಪ್ಪಗೌಡ ಪಾಟೀಲ, ಕೃಷ್ಣಾನಗೌಡ, ರಾಮನಗೌಡ ಪಾಟೀಲ್, ಮಲ್ಲಪ್ಪ ಟಕೆದ ಮೇಲ್ಜಾತಿಯ ಗಾಣಿಗ ಸಮುದಾಯಕ್ಕೆ ಸೇರಿದ ಇವರೆಲ್ಲರೂ ಕೂಡಿಕೊಂಡು ದಲಿತ ಸಮುದಾಯಕ್ಕೆ ಸೇರಿದ ಅಕ್ಷತಾಳನ್ನು ಮದುವೆ ಆದ ಕಾರಣ ಸಾರ್ವಜನಿಕ ಸ್ಥಳಗದಲ್ಲಿ ಜಾತಿನಿಂದನೆ ಮಾಡುವುದರೊಂದಿಗೆ ಅಕ್ಷತಾಳ ಗಂಡ ಮಂಜುನಾಥ ಕಟಗಿ ಮತ್ತು ಅಕ್ಷತಾಳ ಅಣ್ಣನಾದ ಮಂಜುನಾಥ ಹುನಸಿಮರದ ಹಾಗೂ ಅನ್ವರಸಾಬ ಈ ನಾಲ್ಕು ಜನರನ್ನು ಪೆಟ್ರೋಲ್ ಪಂಪಿನಲ್ಲಿ ಮನಬಂದಂತೆ ತಳಿಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ.
ಅಂತರ್ಜಾತಿ ಮದುವೆ ಆಗಿದ್ದಕ್ಕೆ ದ್ವೇಷದಿಂದ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಎಂಟು ಜನ ವಿರುದ್ಧ ದಿ. 14/05/2025 ಬುಧವಾರರಂದು ರೋಣ ಪೊಲೀಸ್ ಠಾಣಾದಲ್ಲಿ ಎಸ್ ಸಿ, ಎಸ್ ಟಿ ಪ್ರಕರಣ ದಾಖಲಾಗಿದ್ದು ಸುಮಾರು 5 ದಿನ ಗತಿಸುತ್ತಾ ಬಂದರೂ ಕೂಡಾ 8 ಜನ ಆರೋಪಿ ಪೈಕಿ 4 ಜನ ಮಾತ್ರ ಬಂಧಿಸಲು ಮಾತ್ರ ರೋಣ ಪೊಲೀಸ್ ಇಲಾಖೆಯವರು ಯಶಸ್ವಿಯಾಗಿದ್ದಾರೆ ಇನ್ನುಳಿದ ಆರೋಪಿಗಳನ್ನು ಬಂಧಿಸದೆ ಇರುವ ಕಾರಣ ದಿ. 18/05/2025 ಭಾನುವಾರ ದಂದು ರೋಣ ದಲಿತ ಮುಖಂಡರು ಪೊಲೀಸ್ ಇಲಾಖೆ ಮುಂಭಾಗ ಧರಣಿ ಸತ್ಯಾಗ್ರಹ ಮಾಡಲು ಮುಂದಾದ ವಿವಿಧ ದಲಿತ ಸಂಘಟನೆಯ ಮುಖಂಡರು ಮತ್ತು ಯುವಕರು
ಪ್ರತಿಭಟನೆ ವೇಳೆ ನಿಂಗಪ್ಪ ಮಾದರ ಮಾತನಾಡಿ ಅಂತರ್ಜಾತಿ ಮದುವೆಯಾದ ಅಮಾಯಕ ಬಡ ದಲಿತ ಮಹಿಳೆ ಮತ್ತು ಅವಳ ಕುಟುಂಬದ ಮೇಲೆ ದೌರ್ಜನ್ಯ ಎಸಗಿ, ಹಲ್ಲೆ ಮಾಡಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೂಡಲೇ ಇನ್ನುಳಿದ 4 ಜನ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಬಳಿಕ ರೋಣ ಠಾಣಾ ಸಿಪಿಐ ಎಸ್ ಎಸ್ ಬೀಳಗಿ ಮಾತನಾಡಿ ನಮ್ಮ ಇಲಾಖೆ ಸಿಬ್ಬಂದಿ 5 ದಿನಗಳ ಕಾಲ ಆರೋಪಿತರನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಾ ಇದೆ 8 ಜನ ಆರೋಪಿ ಪೈಕಿ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ ಇನ್ನುಳಿದ ಆರೋಪಿಗಳನ್ನು ಬಂಧಿಸಲು ಮಂಗಳವಾರದ ವರೆಗೆ ಸಮಯ ಕಲ್ಪಿಸಿ ಕೊಡಿ ಎಂದು ಧರಣಿ ಸತ್ಯಾಗ್ರಹವನ್ನು ಇಲ್ಲಿಗೆ ನಿಲ್ಲಿಸಿ ಎಂದು ಹೇಳಿದರು.
ನಂತರ ಮಾತನಾಡಿದ ಮುಖಂಡರು ಅಂತರ್ಜಾತಿ ಮದುವೆಯಾದ ಮಹಿಳೆ ಕುಟುಂಬದ ಮೇಲೆ ದೌರ್ಜನ್ಯ ಎಸಗಿ, ಹಲ್ಲೆ ಮಾಡಿದ ಆರೋಪಿಗಳನ್ನು ಮಂಗಳವಾರದ ಒಳಗಡೆ ಬಂಧಿಸಬೇಕು ಒಂದು ವೇಳೆ ಮಂಗಳವಾರದ ಒಳಗಡೆ ಬಂಧಿಸದೆ ಇದ್ದಲ್ಲಿ ಮುಂಬರುವ ದಿನದಲ್ಲಿ ಪೊಲೀಸ್ ಇಲಾಖೆ ವಿರುದ್ಧ ವಿವಿಧ ದಲಿತಪರ ಸಂಘಟನೆ ವತಿಯಿಂದ ತಾಲೂಕಿನಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳಲಾಗುವದು ಎಂದು ಎಚ್ಚರಿಕೆ ಕೊಡುವದರ ಮೂಲಕ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಪ್ರಕಾಶ ಹೊಸಳ್ಳಿ, ಸುರೇಶ ನಡುವಿನಮನಿ, ಸೋಮು ನಾಗರಾಜ್, ಯಲ್ಲಪ್ಪ ಹಿರೇಮನಿ, ಶರಣಪ್ಪ ದೊಡ್ಡಮನಿ, ವಾಸುದೇವ ಹರುಣಸಿ, ಪ್ರಕಾಶ ಮಾದರ, ದುರುಗಪ್ಪ ಮಾದರ, ಚಂದ್ರು ಹಂಚಿನಾಳ, ಮಾದೇವ ತಗ್ಗಿನಮನಿ, ಅಭಿಷೇಕ ಕೊಪ್ಪದ, ಹುಚ್ಚಿರಪ್ಪ ಬಾವಿಮಣಿ, ಸುರೇಶ ಹಲಗಿ, ಮಂಜು ಹಲಗಿ ಸೇರಿದಂತೆ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.
- ಕರುನಾಡ ಕಂದ
