
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಸಾಧಾರಣ ಮಳೆ ಆಗಿರುವುದರಿಂದ ಕೊಟ್ಟೂರು ಪಟ್ಟಣದ ಸಿ, ಪಿ ಎಡ್ ಕಾಲೇಜ್ ಹತ್ತಿರ ಹಾಗೂ ಕೊಟ್ಟೂರು ಟು ಉಜ್ಜಿನಿ, ಅರಬಾವಿ ಟು ಚಳ್ಳಕೆರೆ ರಾಜ್ಯ ಹೆದ್ದಾರಿ ಈ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ಬರುವ ಸನ್ನಿದಿ P U C ಕಾಲೇಜು ಸಮೀಪದ ಈ ರಸ್ತೆಯಲ್ಲಿ ಪ್ರತಿ ದಿನ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸವಾರರು ಓಡಾಡುತ್ತಾರೆ.
ಈ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದು ಮಳೆ ಬಂದರೆ ಸಾಕು ನೀರು ತುಂಬಿಕೊಂಡಿರುತ್ತದೆ ,
ಈ ರಸ್ತೆಯಲ್ಲಿ ಸಾರ್ವಜನಿಕರು ಜೀವ ಭಯ ಲೆಕ್ಕಿಸದೆ ರಸ್ತೆ ದಾಟಿ ಬಿದ್ದು ಎದ್ದು ಹೋಗುವ ಪರಿಸ್ಥಿತಿ ಎದುರಾಗಿದೆ.
ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಈ ರಸ್ತೆ ಸ್ವಚ್ಛ ರಸ್ತೆಯನ್ನಾಗಿ ನಿರ್ಮಾಣ ಮಾಡುವುದನ್ನು ಮರೆತು ಕಣ್ಮುಚ್ಚಿ ಕುಳಿತಿದ್ದಾರೆ ,
ಅತಿ ಶೀಘ್ರದಲ್ಲಿ ಈ ರಸ್ತೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಅಖಿಲ ಕರ್ನಾಟಕ ಕಿಸಾನ್ ಜಾಗೃತ ಸಂಘಟನೆ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಈ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತೇವೆ ಎಂದು ಜಿಲ್ಲಾ ಉಪಾದ್ಯಕ್ಷರಾದ ಜಂಬೂರು ಮರುಳಸಿದ್ದಪ್ಪ ಮಾಧ್ಯಮದ ಜೊತೆ ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಗ್ರಹಿಸಿದರು.
- ಕರುನಾಡ ಕಂದ
