ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಸಿಡಿಲು ಬಡದು ಪುಟ್ಟೇಗೌಡ ರವರ ಹಸು ಸಿಡಿಲು ಬಡಿದು ಸಾವನ್ನಪ್ಪಿದ್ದು ಕೂಲಿ ಕಾರ್ಮಿಕರಾದ ರೈತರಿಗೆ ಈ ಹಸು ಆಧಾರವಾಗಿದ್ದು ಹಸು ಕಳೆದುಕೊಂಡವರ ಕುಟುಂಬದವರ ಗೋಳು ನೋಡಲಾಗುತ್ತಿಲ್ಲ ಇದಕ್ಕೆ ಸರ್ಕಾರವು ಸ್ಪಂದಿಸಿ ಅವರಿಗೆ ಆರ್ಥಿಕ ನೆರವನ್ನು ಮಾಡಿ ಕುಟುಂಬ ನಿರ್ವಹಣೆ ಮಾಡಲು ಸಹಾಯ ಮಾಡಬೇಕೆಂದು ಗ್ರಾಮಸ್ಥರು ಕೋರಿದರು. ಇದಕ್ಕೆ ಸಂಬಂಧಪಟ್ಟಂತೆ ಪಶು ವೈದಾಧಿಕಾರಿ ಬಂದು ಮರಣೋತ್ತರ ಪರೀಕ್ಷೆ ಮಾಡಿ ಸರ್ಕಾರದಿಂದ ಸಿಗುವ ಪರಿಹಾರವನ್ನು ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ವರದಿ ಎಚ್ಆರ್ ಶಂಕರ್
