ಬಳ್ಳಾರಿ / ಕಂಪ್ಲಿ : ತಾಲೂಕಿನ ಮಾವಿನಹಳ್ಳಿಯ ಗ್ರಾಮದ ಶ್ರೀ ಸಿದ್ದಪ್ಪ ತಾತನ ದೇವಸ್ಥಾನದವರೆಗೆ ಕೆಸರುಗದ್ದೆ ಅಂತ ಆಗಿದೆ.
ಗ್ರಾಮದ ಸಾರ್ವಜನಿಕರು ವ್ಯವಸ್ಥಿತವಾದ ರಸ್ತೆ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ ಈ ಕಡೆ ಗಮನಹರಿಸದ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಕ್ಷೇತ್ರದ ಶಾಸಕರು, ಕೆಸರು ಗದ್ದೆಯಾಂತಾದ ಮಾವಿನಹಳ್ಳಿಯ ಶ್ರೀ ಸಿದ್ದಪ್ಪ ತಾತನ ರಸ್ತೆ ಮಳೆ ಬಂದರೆ ಓಡಾಡಲು ಹರಸಹಾಸಪಡುತ್ತಿದ್ದಾರೆ.
ವಯೋ ವೃದ್ಧರೂ, ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ತುಂಬಾ ಕಷ್ಟ ಪಡುತ್ತಿದ್ದಾರೆ.
ಸರಿಯಾಗಿ ದ್ವಿಚಕ್ರ ವಾಹನ ಸಂಚರಿಸಲು ಆಗುವುದಿಲ್ಲ. ಇದರಿಂದ ಜನರು ಓಡಾಟ ನಡೆಸಲು ಹಿಂಜರಿಯುತ್ತಾರೆ. ಹೊಲಗಳಿಗೆ ಹೋಗಲು ಈ ದಾರಿ ಮುಖಾಂತರ ದಿನ ನಿತ್ಯ ಸಂಚಾರ ಮಾಡಬೇಕು ಆದರೆ ಈ ರೀತಿ ಆದರೂ ಸಹ ಗ್ರಾಮೀಣ ಜನರಿಗೆ ಸರಿಯಾಗಿ ಸೌಲಭ್ಯಗಳನ್ನು ನೀಡಿಲ್ಲ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು.
ದಯವಿಟ್ಟು ಗ್ರಾಮ ಪಂಚಾಯಿತಿ ಸುಗ್ಗೇನಹಳ್ಳಿ ಪಿಡಿಓ ಮತ್ತು ಕಾರ್ಯದರ್ಶಿ ಹಾಗೂ ಕಂಪ್ಲಿ ಕ್ಷೇತ್ರದ ಶಾಸಕರು ಗ್ರಾಮೀಣ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಊರಿನ ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ
