ಕೊಪ್ಪಳ/ ಯಲಬುರ್ಗಾ : ತಾಲೂಕಿನ ಸುಕ್ಷೇತ್ರ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುರ್ದಶಿ ಅಂಗವಾಗಿ ಮೇ.೨೬ ರಂದು ಜರುಗಿರುವ ೩೭೪ ನೇ ಶಿವಾನುಭವಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮುಖಂಡರಾದ ಹುಲಗಪ್ಪ ಬಂಡಿವಡ್ಡರ ಅವರು ಶಿಕ್ಷಣದಿಂದ ಸ್ವಾಭಿಮಾನದ ಬದುಕು ಸಾಧ್ಯ ಎಂಬ ವಿಷಯವಾಗಿ ಮಾತನಾಡಿ ಶಿಕ್ಷಣವಿದ್ದಾಗ ಮಾತ್ರ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಮಕ್ಕಳು ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆದು ಗೌರವದಿಂದ ಬಾಳುವುದಕ್ಕೆ ಸಾಧ್ಯ ಎಂದು ಮುಖಂಡ ಭೀಮಣ್ಣ ಹವಳಿ ಮಾತನಾಡಿದರು. ಈರಪ್ಪ ರಾವಣಿಕಿ, ಭೀಮಣ್ಣ ಚಿಕ್ಕಗೌಡ್ರ ಮಾತನಾಡಿದರು. ಧರ್ಮರ ಮಠದ ಹನುಮಂತಪ್ಪ ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಸಂಸ್ಕೃತಿಯ ಮಾರ್ಗದರ್ಶನ ನೀಡಬೇಕು , ಮಕ್ಕಳು ಗುರುಗಳಲ್ಲಿ ನಯ ವಿನಯದಿಂದ ಬಾಗಿದಾಗ ನಮ್ಮ ಭವಿಷ್ಯ ಉಜ್ವಲವಾಗತ್ತದೆ ಎಂದು ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ೨೦೨೪ – ೨೫ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವೀತಿಯ ವರ್ಷದಲ್ಲಿ ೮೦% ಪ್ರತಿಶತ ಹೆಚ್ಚಿಗೆ ಪಡೆದಿರುವ ವಿದ್ಯಾರ್ಥಿಗಳಿಗೆ ಶಿವಾನುಭವ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರವನ್ನು ಮುಂದಿನ ೩೭೬ನೇ ಶಿವಾನುಭವ ಗೋಷ್ಠಿಯಲ್ಲಿ ಸನ್ಮಾನಿಸಲಾಗುವದು, ದಮ್ಮೂರ ಗ್ರಾಮದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಆಧಾರ ಕಾರ್ಡ, ತಮ್ಮ ಭಾವಚಿತ್ರವನ್ನು ಶ್ರೀಮಠದ ಒಡೆಯರಲ್ಲಿ ಸಲ್ಲಿಸಿ ಇದರ ಸದುಪಯೋಗವನ್ನು ಪಡೆಯಬೇಕು ಎಂದರು. ಈ ವೇಳೆ ಮುಖಂಡರಾದ ಶರಣಪ್ಪ ಕಟಾರಿ,ಭೀಮಪ್ಪ ಹರಿಜನ,ನಾಗರಾಜ ಹಿರೇಮಠ, ಶರಣೇಗೌಡ ದ್ಯಾಮನಗೌಡ್ರ, ಗಣೇಶ ನಿಡಗುಂದಿ ,ಬಸವರಾಜ ಮೇಲಸಕ್ರಿ, ಬಾಲಪ್ಪ ಜರಕುಂಟಿ ಇತರರು ಇದ್ದರು. ಸಂಗೀತ ಸೇವೆಯನ್ನು ನೀಲಕಂಠಪ್ಪ ರೋಡ್ಡರ, ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಸೇರಿದಂತೆ ಇತರರು ಸಲ್ಲಿಸಿದರು. ನಂತರ ಅನ್ನಸಂತರ್ಪಣೆ ಜರುಗಿತು.
- ಕರುನಾಡ ಕಂದ
