ಚಾಮರಾಜನಗರ/ ಹನೂರು : ರಾಜ್ಯ ಸರ್ಕಾರವು ಕಾಡು ಪ್ರಾಣಿಗಳ ರಕ್ಷಣೆಗಾಗಿ ಕೋಟ್ಯಾಂತರ ರೂ. ಗಳನ್ನು ವ್ಯಯಿಸುತ್ತಿದ್ದು ಇದರಿಂದ ಅರಣ್ಯದ ಜೊತೆಯಲ್ಲಿ ವನ್ಯ ಜೀವಿ ರಕ್ಷಣೆ ನಮ್ಮೆಲ್ಲರ ಜವಬ್ದಾರಿಯಾಗಿರುತ್ತದೆ ಅಂತಹ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಿ ಪ್ರಾಣಿಗಳ ಸಂರಕ್ಷಣಾ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಭಾಗವಹಿಸ ಬೇಕೆಂದು ಪತ್ರಕರ್ತರಾದ ಕಾಂಚಳ್ಳಿ ಬಸವರಾಜು ತಿಳಿಸಿದರು.
ಹನೂರು ತಾಲ್ಲೂಕಿನ ಕಾಂಚಳ್ಳಿ ಗ್ರಾಮದಿಂದ ಹೊರಟು ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಮಾದಪ್ಪನ ದೇವರ ದರ್ಶನ ಮಾಡಲು ಸೋಮವಾರ ಮುಂಜಾನೆ ಸುಮಾರು ಏಳು ಘಂಟೆಗೆ ಹೊರಟ ಸಂದರ್ಭದಲ್ಲಿ ಹನೂರು ಪಟ್ಟಣದ ಸಮೀಪವಿರುವ ನರ್ಸರಿಯ ಪಕ್ಕದಲ್ಲಿರುವ ರಾಮಾಪುರ ಮತ್ತು ಹನೂರು ತಾಲ್ಲೂಕು ಕೇಂದ್ರಕ್ಕೆ ಹಾದು ಹೋಗುವ ಮಾರ್ಗಮದ್ಯೆಯ ರಸ್ತೆ ಪಕ್ಕದ ಕಾಡಿನಲ್ಲಿ ಜಿಂಕೆಯನ್ನು ಊರುಗಳಲ್ಲಿ ವಾಸಿಸುವ ಸಾಕುವ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಹೋಗುವ ಸಮಯದಲ್ಲಿ ನಾನು ನೋಡಿದ ತಕ್ಷಣ ಅವುಗಳಿಂದ ಕಾಡು ಪ್ರಾಣಿಯನ್ನು ರಕ್ಷಣೆ ಮಾಡಿದೆ ನಂತರ ಸಮೀಪದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ ಕೆಲವು ಸಮಯದ ನಂತರ ಸ್ಥಳಕ್ಕೆ ಆಗಮಿಸಿ ನನಗೆ ಸ್ಪಂದಿಸುವ ಕಾರ್ಯವನ್ನು ಮಾಡಲು ಅಧಿಕಾರಿಗಳಾದ ಆರ್ ಎಫ್ ಒ ರವರಿಗೆ ತಿಳಿಸಿದಾಗ ಅವರು ಇಲಾಖೆಯ ನೌಕರರಾದ ಚಿನ್ನಸ್ವಾಮಿ ಎಂಬುವವರನ್ನು ಕಳುಹಿಸಿದರು ನಂತರ ಆ ಪ್ರಾಣಿಯನ್ನು ಕಾಡಿಗೆ ಬಿಟ್ಟು ಬರಲಾಯಿತು ಎಂದು ತಿಳಿಸಿದರು ಇಂತಹ ಸಾಮಾಜಿಕ ಕಾರ್ಯಕ್ಕೆ ಪತ್ರಕರ್ತರಾದ ಬಸವರಾಜು ಕೈ ಜೋಡಿಸಿದರಿಂದ ಸಾರ್ವಜನಿಕರು ಉತ್ತಮ ಪ್ರಶಂಸೆಯ ಸುರಿಮಳೆಗೈದಿದ್ದರು.
ವರದಿ :ಉಸ್ಮಾನ್ ಖಾನ್
