ಬಳ್ಳಾರಿ ಕಂಪ್ಲಿ : ಜೂ.1ರಂದು ನಿವೃತ್ತಿ ಹೊಂದಲಿರುವ ಗಾದಿಗನೂರು ಗ್ರಾಪಂ ಪಿಡಿಒ ಕೆ.ಮಲ್ಲಿಕಾರ್ಜುನ ಇವರಿಗೆ ಸಿಬ್ಬಂದಿಗಳು ಹಾಗೂ ಕಾಯಕ ಬಂಧುಗಳು ಮತ್ತು ಕೂಲಿ ಕಾರ್ಮಿಕರು ತಾಲೂಕು ಸಮೀಪದ ಗಾದಿಗನೂರು ಗ್ರಾಮದ ಕೆರೆ ಬಳಿಯಲ್ಲಿ ಮಂಗಳವಾರ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಿದರು.
ಗ್ರಾ. ಪಂ. ಯ ಡಾಟಾ ಎಂಟ್ರಿ ಆಪರೇಟರ್ ಬೈಲಪ್ಪ ಮಾತನಾಡಿ, ಪಿಡಿಒ ಮಲ್ಲಿಕಾರ್ಜುನ ಇವರು ಗಾದಿಗನೂರು ಸೇರಿದಂತೆ ಹಲವು ವರ್ಷಗಳ ಕಾಲ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜನರ ನಂಬಿಕೆಯಂತೆ ಗ್ರಾ. ಪಂ. ಯ ಪ್ರತಿಯೊಂದು ಯೋಜನೆಗಳನ್ನು ಮುಟ್ಟಿಸುವ ಮೂಲಕ ಸಮಾಜ ಸೇವೆಯೊಂದಿಗೆ ಪ್ರತಿಯೊಬ್ಬರ ಮನದಲ್ಲಿ ಹಚ್ಚಹಸಿರಾಗಿ ಉಳಿಸಿದ್ದಾರೆ. ಶಿಸ್ತಿನ ಸಿಪಾಯಿಯಂತೆ ಕರ್ತವ್ಯ ಮಾಡುವ ಮೂಲಕ ಜನರ ಮೆಚ್ಚುಗೆ ಪಡೆದು, ಇದೇ ಜೂ.1ರಂದು ನಿವೃತ್ತಿ ಹೊಂದುತ್ತಿರುವುದು ಖುಷಿಯ ಜೊತೆಗೆ ಬೇಸರದ ಸಂಗತಿಯಾಗಿದೆ. ಇನ್ನಷ್ಟು ದಿನ ಇವರ ಸೇವೆ ಅಗತ್ಯವಾಗಿತ್ತು. ಆದರೆ, ಸರ್ಕಾರದ ನಿರ್ದೇಶನದಂತೆ ನಿವೃತ್ತಿ ಎಂಬುವುದು ಸಾಮಾನ್ಯ, ಆದ್ದರಿಂದ ಮುಂದಿನ ದಿನದಲ್ಲಿ ಇವರು ಬದುಕು ನೆಮ್ಮದಿ ಜತೆಗೆ ಸಂತೋಷದಿಂದ ಕೂಡಿರಲಿ ಎಂದರು.
ಈ ಸಂದರ್ಭದಲ್ಲಿ ಬಿಎಫ್ ಡಿ ಎಲ್.ಸತೀಶ್, ಕಾಯಕ ಬಂಧುಗಳಾದ ದುರುಗಪ್ಪ, ಶರಣಕುಮಾರ, ಎನ್.ಸಿದ್ದಪ್ಪ, ದಮ್ಮೂರಪ್ಪ, ಮಹಾಲಕ್ಷ್ಮಿ, ವಿಜಯಲಕ್ಷ್ಮಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
