ಕಾರಟಗಿ:ತಾಲೂಕಿನ ಕರ್ನಾಟಕ ಪ್ರಾಂತ್ಯ ಕೂಲಿಕಾರರ ಸಂಘದಿಂದ ಕೊಪ್ಪಳ ಜಿಲ್ಲೆ ಅತಿದೃಷ್ಟಿ ಎಂದು ಘೋಷಿಸಿದ ಸರಕಾರ, ಮನ ರೇಗಾ ಯೋಜನೆ ಅಡಿಯಲ್ಲಿ 50 ಮಾನವನ ದಿನಗಳ ಕೆಲಸ ಕೊಡುವ ಬಗ್ಗೆ ಮತ್ತು ಸಿಂಗನಾಳ ಗ್ರಾಮದ ಸರಕಾರ ಭೂಮಿ ಸಾಗುವಳಿ ಮಾಡುವವರಿಗೆ ಸಾಗುವಳಿ ಚೀಟಿ ಮತ್ತು ಪಹಣಿಯನ್ನು ನೀಡುವಂತೆ ಮತ್ತು ಸಿಂಗನಾಳ ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪರಮ್ ನಂಬರ್ 57 ಹಾಕಿದವರಿಗೆ,ಚೀಟಿ ಮಂಜೂರಾತಿ ಮಾಡಬೇಕು,ಗ್ರಾಮದಲ್ಲಿ ಸರಕಾರ ಆಸ್ಪತ್ರೆ ನಿರ್ಮಿಸಲು ಸರ್ವೆ ನಂಬರ್ 48 ರಲ್ಲಿ, 1.31ಎ.ಗುಂಟೆ ಎಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಆಸ್ಪತ್ರೆ ನಿರ್ಮಿಸಬೇಕು,ಸಿಂಗನಾಳ ಬ್ರಿಜ್ ನಲ್ಲಿ ಎರಡು ಬದಿಯಲ್ಲಿ ಸಾರ್ವಜನಿಕರು ಹಳ್ಳದ ನೀರಿಗೆ ಬಟ್ಟೆ ಒಗೆಯಲು ಅನುಕೂಲವಾಗುವಂತೆ ಮೆಟ್ಟಿಲವನ್ನು ನಿರ್ಮಿಸಬೇಕು,ಸಿಂಗನಾಳ ಗ್ರಾಮದ ಮಳಗಡ್ಡಿ 2ನೇ ವಾರ್ಡಿನಲ್ಲಿ,ಸರಕಾರಿ ಭೂಮಿಯಲ್ಲಿ 94/ಸಿ ಅರ್ಜಿ ಸಲ್ಲಿಸಿದವರಿಗೆ ಹಕ್ಕು ಪತ್ರ ನೀಡಬೇಕು,ಎಂದು ಕಾರಟಗಿ ತಾಲೂಕಿನ ಕೃಷಿ ಪ್ರಾಂತ್ಯ ಕೂಲಿಕಾರರ ಸಂಘದಿಂದ ಕಾರಟಿಗಿ ತಾಲೂಕು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು,ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿಯಾದ ಎಲ್ಲಪ್ಪ,ಹುಸೇನಪ್ಪ.ಕೆ, ಹನುಮಂತಪ್ಪ,ಎಚ್.ಕನಕರಾಯ, ದುರ್ಗಮ್ಮ, ಶಾಂತಮ್ಮ, ಮುದುಕಮ್ಮ, ಶಿವಪ್ಪ ,ಕರಿಯಪ್ಪ ,ಬಾಗಪ್ಪ, ವೆಂಕಟೇಶ, ಕನಕಪ್ಪ, ಮಂಜಪ್ಪ ಹಾಗೂ ಕಾರಟಗಿ ತಾಲೂಕಿನ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.