ಪಾವಂಜೆ,ಹಳೆಯಂಗಡಿ,ಮಂಗಳೂರು,ಜನವರಿ 19: ಪಾವಂಜೆ ಗ್ರಾಮ ಮತ್ತು ದೇವಸ್ಥಾನವು 600 ವರ್ಷಗಳಿಗಿಂತ ಹೆಚ್ಚು ದಾಖಲಾದ ಹಲವಾರು ಶಾಸನಗಳು ಮತ್ತು ಇತಿಹಾಸವನ್ನು ಹೊಂದಿದೆ ಮತ್ತು ಸುತ್ತಮುತ್ತಲಿನ ಇತರ ದೇವಾಲಯಗಳ ಪುರಾತತ್ವ ಪುರಾವೆಗಳಿವೆ.ಹೊಯ್ಸಳ ಸಾಮ್ರಾಜ್ಯದ ರಾಜರು ಮತ್ತು ನಂತರ
ವಿಜಯನಗರ ಅರಸರು ಈ ಪ್ರದೇಶದ ಮಹಾನ್ ಪೋಷಕರಾಗಿದ್ದರು.
ಅವರಿಂದ ಈ ದೇವಾಲಯಕ್ಕೆ ಹಲವಾರು ಅನುದಾನಗಳನ್ನು ಮಾಡಲಾಗಿದೆ.ದೇವಾಲಯದಲ್ಲಿನ ಶಾಸನಗಳ ಮೂಲಕ 1397 A.D ಮತ್ತು 1438 A.D ನಲ್ಲಿ ಮಾಡಿದ ಅನುದಾನವನ್ನು ದಾಖಲಿಸಲಾಗಿದೆ.
ಜೂಲೈ 2022 ರಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯವು ದೇವಸ್ಥಾನದ ಮಾಹಿತಿಯನ್ನು ಒಂದು ನಿಗದಿತ ಸರ್ವೇ ಮೂಲಕ ಪಡೆದುಕೊಂಡಿತ್ತು. ಈ ಆರು ತಿಂಗಳ ಅವಧಿಯಲ್ಲಿ ದೇವಸ್ಥಾನದ ಅಭೂತಪೂರ್ವ ಜೀರ್ಣೋದ್ಧಾರ ಆಗಿದ್ದು ವಿಸ್ಮಯವಾಗಿದೆ.
ನಿನ್ನೆ ಬೆಳಗ್ಗೆ ಗಂಟೆ ಎಂಟರಿಂದ ಅಷ್ಟಬಂಧ ಬ್ರಹ್ಮಕಲಶದ ಪ್ರಕ್ರಿಯೆಯು ವಿಧ್ಯುಕ್ತವಾಗಿ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠ ಸ್ವಾಮಿಗಳಿಂದ ತೋರಣ ಮುಹೂರ್ತ ಮೂಲಕ ಆರಂಭ ಗೊಂಡಿತು ಮಧ್ಯಾಹ್ನ ಗಂಟೆ ಮೂರರಿಂದ ಸಾಮೂಹಿಕ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆಯು ಶ್ರೀ ಅನಂತ ಪದ್ಮನಾಭ ಅಸ್ರಣ್ಣರ ದಿವ್ಯಹಸ್ತದಿಂದ ದೀಪ ಪಜ್ವಲನೆ ಮೂಲಕ,ಈ ಗಣ್ಯರ ಉಪಸ್ಥಿತಿಯಲ್ಲಿ ಶ್ರೀ ದುಗ್ಗಣ್ಣ ಸಾವಂತರು, ಮುಲ್ಕಿ ಸೀಮೆ ಅರಸರು, ಮಾನ್ಯ ಶಾಸಕ ಶ್ರೀ ಉಮಾನಾಥ ಕೋಟ್ಯಾನ್, ಮಾಜಿ ಶಾಸಕ ಶ್ರೀ ಅಭಯಚಂದ್ರ ಜೈನ ಮತ್ತು ಸಹಸ್ರಾರು ಭಕ್ತ ಸಮೂದಾಯರೊಡಗೂಡಿ ಪಡುಪಣಂಬೂರು ಅರಮನೆಯಿಂದ ಕಾಲ್ನಡಿಗೆಯಲ್ಲಿ ಮತ್ತು ವಾಹನಗಳಲ್ಲಿ ಹಲವಾರು ಹಣ್ಣು, ತರಕಾರಿ, ದವಸ ಧಾನ್ಯ ವನ್ನು ವಿವಿಧ ಚಂಡೆ ವಾದ್ಯ, ವೇಷ ಭೂಷಣಗಳೊಂದಿಗೆ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು.
ದಿನಾಂಕ ಜನವರಿ 28 ರಂದು ಬೆಳಗ್ಗೆ 8:10ಕ್ಕೆ ಕುಂಭ ಲಗ್ನದಲ್ಲಿ ಅಷ್ಟಬಂದ ಬ್ರಹ್ಮ ಕುಂಭಾಭಿಷೇಕ ಜರಗಲಿದೆ. ಮುಂದಿನ ಹತ್ತು ದಿನ ಪಾವಂಜೆಯಲ್ಲಿ ಪತಿನಿತ್ಯ ಧಾರ್ಮಿಕ ಕ್ರಿಯೆಗಳು, ಅನ್ನ ಸಂತರ್ಪಣೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವಿವಿಧ ಮಠದ ಸ್ವಾಮೀಜಿಗಳು, ಧಾರ್ಮಿಕ ಗಣ್ಯರು, ಶಾಸಕರು, ರಾಜ್ಯ ಸರಕಾರದ ಸಚಿವರು, ಲೋಕಸಭಾ ಸದಸ್ಯರು, ಉದ್ಯಮಿಗಳು ನಿಗಧಿತ ದಿನಗಳಲ್ಲಿ ಬಂದು ಈ ಮಹಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ