ವಿಶ್ವದಲ್ಲಿಯೇ ಭಾರತ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಡೆದುಬಂದಿದೆ. ಬೃಹತ್ ಜನಸಂಖ್ಯೆ ಹೊಂದಿದ ರಾಷ್ಟ್ರ ವಾದರೂ ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದೆ. ಎಲ್ಲ ವಿಧಗಳಲ್ಲಿ ಅಭಿವೃದ್ಧಿ ಸಾಧಿಸುವ ಸಂಕಲ್ಪ ಮಾಡಬೇಕಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತದಿಂದ ನಡೆದ ೭೪ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂಡಿ ತಾಲೂಕನ್ನು ಐತಿಹಾಸಿಕ ಜಿಲ್ಲೆಯನ್ನಾಗಿಸುವ ಐತಿಹಾಸಿಕ ನಿರ್ಣಯ ಮಾಡಬೇಕಾಗಿದೆ. ರೇವಣಸಿದ್ದೇಶ್ವರ ಏತ ನೀರಾವರಿಯ ೩.೭೩ ಟಿಎಂಸಿ ನೀರನ್ನು ಬಳಸಿಕೊಂಡು ಮತಕ್ಷೇತ್ರವನ್ನು ಸಮಗ್ರ ನೀರಾವರಿಯನ್ನಾಗಿಸುವ ಕನಸು ನನಸಾಗಬೇಕಾಗಿದೆ. ತಾಲೂಕಿನಲ್ಲಿ ಅರಣ್ಯ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವದು, ಬೂದಿಹಾಳ ಗ್ರಾಮದ ಹತ್ತಿರ ಕೈಗಾರಿಕೆ ಉತ್ತೇಜನಕ್ಕೆ ೨೫ ಎಕರೆ ಭೂಮಿ ಪಡೆದಿದೆ, ನಿಂಬೆ ಅಭಿವೃದ್ಧಿ ಮಂಡಳಿಗೆ ಪ್ರೋತ್ಸಾಹ ನೀಡಿ ಬಲಪಡಿಸುವ ಜೊತೆಗೆ ನಿಂಬೆಗೆ ಇಂಡಿಯ ನಿಂಬೆ ಎಂದು ಜಿ.ಐ ಟ್ಯಾಗ ದೊರೆಯಲಿದ್ದು ಅದರಿಂದ ನಿಂಬೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ಮತಕ್ಷೇತ್ರದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿಸಲು ಸಹಕರಿಸಿದ ಅಧಿಕಾರಿಗಳ ಕ್ರಿಯಾಶೀಲತೆ ಇಶ್ಚಾಶಕ್ತಿಯಿಂದ ಸಾಧ್ಯವಾಗಿದೆ ಎಂದರು.
ಶಿಕ್ಷಕರನ್ನು ದೇವರೆಂದು ಕಂಡ ತಾಲೂಕು ನಮ್ಮದು. ಅದನ್ನು ಮಾದರಿಯಾಗಿ ಇಟ್ಟುಕೊಂಡು ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕಾಗಿದೆ. ಮತ್ತೆ ಈ ಬಾರಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಮೊದಲು ರ‍್ಯಾಂಕ ಬರಲು ಎಲ್ಲರೂ ಪ್ರಯತ್ನಿಸೋಣ ಎಂದರು.
ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ ಮಾತನಾಡಿ ನಮ್ಮ ಸಂವಿಧಾನದಲ್ಲಿ ಸಮಾನತೆ, ಭಾತೃತ್ವ, ಸಹೋದರತೆ ನೀಡಿದೆ. ಜೊತೆಗೆ ಮಹಿಳೆಯರಿಗೆ ಮತದಾನ, ಧಾರ್ಮಿಕ, ವಾಕ್, ಶೈಕ್ಷಣಿಕ ಸವಲತ್ತು ನೀಡಿದ ಹೆಮ್ಮೆ ಪ್ರತೀಕ ನಮ್ಮ ಸಂವಿಧಾನ ಎಂದರು.
ತಹಸೀಲ್ದಾರ ನಾಗಯ್ಯ ಹಿರೇಮಠ, ಬಸವರಾಜ ಗೋರನಾಳ ಮಾತನಾಡಿದರು.
ವೇದಿಕೆಯ ಮೇಲೆ ಡಿಎಸ್‌ಪಿ ಚಂದ್ರಕಾಂತ್ ನಂದರೆಡ್ಡಿ, ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ, ಇಓ ಸುನೀಲ ಮದ್ದೀನ, ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಕೆ.ಎಸ್. ಲಕ್ಷ್ಮೇಶ್ ಮತ್ತಿತರಿದ್ದರು.
ನಾಟಕರಂಗದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಲಲಿತಾ ದಶವಂತ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ರೇವತಿ ಶಿವಾನಂತ ಮಠ, ಪುತಳಾಬಾಯಿ ದಶವಂತ, ಅಪ್ಪಾಶಾ ಧರೇಕರ, ಕುಸ್ತಿಯಲ್ಲಿ ರಾಷ್ಟç ಮಟ್ಟದ ಪ್ರಶಸ್ತಿ ವಿಜೇತ ರಾಘವೇಂದ್ರ ಚಂದ್ರಶೇಖರ ವಾಲಿಕಾರ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ವಿತೇತ ರಾಣಿ ದೇವರ, ಸೀಮಾ ಬಿರಾದಾರ, ಬಂಗಾರದ ಪದಕ ಗಳಿಸಿದ ರಾಜೇಶ ಪವಾರ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನವಮಾನ ನದಾಫ, ಗ್ರಾಮ್ ಒನ್ ಅತ್ಯುತ್ತಮ ಸೇವೆ ಗಾಗಿ ಮಾಲಿಕಂ ನದಾಫ, ನಿಂಗವ್ವ ಶಿರಶ್ಯಾಡ, ಶರಣಪ್ಪ ನಂದರಗಿ, ಸರೋಜಿನಿ ಮಾವಿನಮರ ಇವರನ್ನು ಸನ್ಮಾನಿಸಲಾಯಿತು..
ವರದಿ. ಅರವಿಂದ್ ಕಾಂಬಳೆ