ಹಚ್ಚಬೇಕು ದೀಪದಿಂದ ದೀಪ
ಮಮತೆಯ ಕರುಣೆಯ ದೀಪ
ಮೌನದ ದೀಪ ಮನುಷ್ಯನ ದೀಪ
ಮಣ್ಣಿನ ಹಣತೆಯ ಬೆಳಕಿನ ದೀಪ
ಹಚ್ಚಬೇಕು ದೀಪ ಸುಖ ಶಾಂತಿ ದೀಪ
ಕಷ್ಟ ಕಳೆದು ಬೆಳಕು ತರುವ ದೀಪ
ಕರುಣೆಯ ನಮ್ಮ ಕನಸಿನ ದೀಪ
ನಮ್ಮ ಮನುಷ್ಯನ ಮನುಜದ ದೀಪ
ದೇವರ ಕಾಣುವುದು ಹಚ್ಚಿದ ದೀಪ
ದೇವರ ಸೃಷ್ಟಿ ಆರತಿಯ ಬೆಳಕಿನ ದೀಪ
ದೇವರು ಶಕ್ತಿ ಒಳಗಿನ ಬೆಳಕಿನ ದೀಪ
ದೇವರ ಮುಂದೆ ಹೊಳೆಯುವ ದೀಪ
ಸೂರ್ಯನ ಹೊಳೆಯುವ ದೀಪ
ಹುಣ್ಣಿಮೆ ಚಂದ್ರನ ಬೆಳಕಿನ ದೀಪ
ಚುಕ್ಕಿಗಳ ಮೋಡದಲ್ಲಿ ಮಿನಗುವ ದೀಪ
ಸಮುದ್ರ ಅಲಿಗಗಳಲ್ಲಿ ತೆರೆಯಲ್ಲಿ ಮಿನುಗು ದೀಪ
- ಅಕ್ಕಮಹಾದೇವಿ ಅಂಗಡಿ ಜಿಲ್ಲಾ ಚುಟುಕು ಸಾಹಿತ್ಯ ಮಹಿಳಾ ಉಪಾಧ್ಯಕ್ಷರು, ಕೊಪ್ಪಳ.




















