ಕೆಲವು ರಾಜಕಾರಣಿಗಳು,
ಹೇಳುತ್ತಾರೆ, ತಾವು ಸಮಾಜವಾದಿಗಳೆಂದು,
ಸಮ ಸಮಾಜ ನಿರ್ಮಾಣ
ತಮ್ಮ ನಿಲುವೆಂದು,
ಇನ್ನೂ ಕೆಲವು ಮುಖಂಡರು
ಹೇಳುತ್ತಾರೆ ತಾವು ಬಲಪಂಥೀಯರೆಂದು,
ಮತ್ತೂ ಕೆಲವರು ಹೇಳುತ್ತಾರೆ,
ತಾವು ಎಡಪಂಥೀಯರೆಂದು,
ಇನ್ನೂ ಕೆಲವರು, ಒಂದು ಹೆಜ್ಜೆ
ಮುಂದೆ ಹೋಗಿ ಹೇಳುತ್ತಾರೆ,
ತಾವು ಕೋಮುವಾದಿಗಳೆಂದು!
ಇಲ್ಲಿ ನಾವೆಲ್ಲರೂ ಒಂದು,
ಅಲ್ಲ, ನಾವೆಲ್ಲರೂ ಹಿಂದು.
ಕಾಂಗ್ರೇಸ್, ಜೆಡಿಎಸ್, ಆರೆಸೆಸ್,(ಬಿಜೆಪಿ.) ಎಲ್ಲರೂ
ಒಂದೇ, ಸ್ವಾರ್ಥಕ್ಕೆ ಹೊಡೆದಾಡಿ ಸಾಯುವ ನಾಯಕರು, ಕ್ಷಮಿಸಿ, ಇವರು
ಕೋಮುವಾದಿಗಳು.
- ಶಿವಪ್ರಸಾದ್ ಹಾದಿಮನಿ, ಕೊಪ್ಪಳ.




















