ಕಲಬುರಗಿ: ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆಯ ಅಡಿಯಲ್ಲಿ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮವು ಆಯ್ಕೆಗೊಂಡಿದ್ದು, ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸಂಪೂರ್ಣ ಗಂಡ ಶ್ರೀನಿವಾಸ ಬಣ್ಣಕ್ಕಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಲಕ್ಷ್ಮಣ್ ಶೃಂಗೇರಿ ಹಾಗೂ ಪಿಡಿಓ ಜಗದೇವಪ್ಪ ಅವರಿಗೆ ಸ್ಮರಣಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗುಂಡಗುರ್ತಿ ಗ್ರಾಂ.ಪಂ ಸದಸ್ಯರಾದ ಸುನೀಲ.ಎಂ.ಅಮ್ಮಗೋಳ ಅವರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















