ಕೊಪ್ಪಳ : ನಿನ್ನೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಇರಕಲ್ಲಗಡದಲ್ಲಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಗ್ರಾಮದ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು 5 ವರ್ಷ ಅಧಿಕಾರವನ್ನು ಪೂರೈಸಿದ್ದಕ್ಕೆ ಗ್ರಾಮಸ್ಥರಿಂದ ಹಾಗೂ ಗ್ರಾಮ ಪಂಚಾಯತಿಯ ಆಡಳಿತ ಅಧಿಕಾರಿಗಳಿಂದ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಂದ ಹಾಗೂ ನಮ್ಮ ಗಂಗಾವತಿ ಯುವ ನಾಯಕರಾದ ಮಾರುತಿ ತೋಟಗಂಟಿ ಉದ್ಯಮಿಗಳಿಂದ ಹಾಗೂ ಇನ್ನಿತರ ಮುಖಂಡರಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಥಳೀಯ ನಾಯಕರನ್ನು ಕೂಡ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇನ್ನಿತರ ಮುಖಂಡರು,ಸ್ಥಳೀಯರು ಉಪಸ್ಥಿತರಿದ್ದರು.
ವರದಿ ಅಮರೇಶ ನಾಯಕ



















