ಗಂಗಾವತಿ : ಮಾಜಿ ವಿಧಾನ ಪರಿಷತ್ ಸದಸ್ಯ, ಸವ್ಯಸಾಚಿ ಚುನಾಯಿತ ಪ್ರತಿನಿಧಿ ಎಂದು ಗುರುತಿಸಿಕೊಂಡಿದ್ದ ಕರಿಯಣ್ಣ ಹೇಮಚಂದ್ರಪ್ಪ ಸಂಗಟಿ ಸೋಮವಾರ ( ಮಾರ್ಚ್ 23) ನಿಧನರಾಗಿದ್ದಾರೆ.
63 ವರ್ಷದ ಸಂಗಟಿ, ಕಳೆದ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕೊಪ್ಪಳದ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಂಗಟಿ ಸೋಮವಾರ ಬೆಳಗಿನ ಜಾವ ಮೂರು ಗಂಟೆಗೆ ಕೊನೆಯುಸಿರೆಳೆದರು.
ಮೃತರಿಗೆ ಪತ್ನಿ ರುದ್ರಮ್ಮ ಸಂಗಟಿ, ಪುತ್ರರಾದ ಬೆಟ್ಟದೇಶ, ಲಿಂಗೇಶ, ಮಹಾಂತೇಶ, ಪುತ್ರಿಯರಾದ ಕವಿತಾ, ನಂದಿನಿ, ಲಕ್ಷ್ಮಿ ಸೇರಿದಂತೆ ಅಪಾರ ಬಂಧು-ಬಳಗವಿದೆ.
ವರದಿ : ಜಿಲಾನಸಾಬ್ ಬಡಿಗೇರ್




















