ತುಮಕೂರಿನ ಮಧುಗಿರಿ ಬೆಟ್ಟದಲ್ಲಿ ಪತ್ತೆ
ಮಧುಗಿರಿ ಪಟ್ಟಣದ ಬೆಟ್ಟದ ಇಳಿಜಾರಿನ ಕಲ್ಲು ಬಂಡೆಗಳಿಂದ ಕೂಡಿದ ಬಂಡೆಯ ಬುಡದಲ್ಲಿ ಅಪರೂಪದ ನಾಗಾರ್ಜುನ ಸಾಗರ ರೇಸರ್ಹಾವು ಪತ್ತೆಯಾಗಿದ್ದು ಉರಗ ಪ್ರೇಮಿ ಗಳಿಗೆ ಕುತೂಹಲ ಹೆಚ್ಚಾಗಿದೆ. ಇದು ರಸೆಲ್ ಕುಕ್ರಿ ಹಾವನ್ನು ಹೋಲುತ್ತದೆಯಾದರೂ ಮೇವಾದ ತಲೆ, ದೇಹದ ಮೇಲಿನ ಹುರುಪೆಗಳು ಹಾಗೂ ಬಣ್ಣದ ಸಹಾಯದಿಂದ ವ್ಯತ್ಯಾಸ ತಿಳಿಯಬ ಹುದು. ನೀಳ ದೇಹದ ಮೇಲೆ ಮೃದುವಾದ ಹುರುಪೆಗಳು, ಬೆನ್ನಿನ ಭಾಗದಲ್ಲಿ ಗಾಢವಾದ ಬೂದು ಬಣ್ಣದ ಉಂಗುರಾಕಾರದ ರಚನೆಗಳು ದೇಹದ ಅರ್ದ ಭಾಗದವರೆಗೂ ಕಂಡು ಬರುತ್ತವೆ. ದಕ್ಷಿಣ ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡು ಬರುವ ಈ ಹಾವು 1976ರಲ್ಲಿ ಆಂಧ್ರ ಪ್ರದೇಶದ ಗೂಂಟೂರು ಜಿಲ್ಲೆಯ ನಾಗಾರ್ಜುನ ಬೆಟ್ಟದಲ್ಲಿ ಕಂಡು ಬಂದಿದ್ದರಿಂದ ಈ ಹಾವಿಗೆ ಈ ಹೆಸರಿಟ್ಟಿದ್ದಾರೆ. ಈ ಹಾವುಗಳು ಶತೃಗಳಿಂದ ರಕ್ಷಸಿ ಕೊಳ್ಳಲು ಹಾಗೂ ಆಹಾರ ಜೀವಿಗಳನ್ನು ಹಿಡಿಯಲು ವೇಗ ಗತಿಯಲ್ಲಿ ಸಾಗುವುದರಿಂದ ರೇಸರ್ ಹೆಸರು ಬಂದಿದೆ. ಇದು ವಿಷರಹಿತ ಹಾವಾಗಿದ್ದು ಮಾನವರಿಗೆ ಯಾವುದೇ ಹಾನಿಯಿಲ್ಲ.




















