ಆಕಾಶ ನೀಲಿ, ಹಕ್ಕಿ ಹಾರುತಿದೆ
ರೆಕ್ಕೆಗಳ ಬಡಿದು, ಮೇಲೇ ಹೋಗುತಿದೆ.
ಸೂರ್ಯನ ಕಿರಣ, ಅದರ ಮೇಲೆ ಬೀಳುತಿದೆ
ಮಿನುಗುವ ಹಾಗೆ, ಅದು ಕಾಣುತಿದೆ ll೦೧ll
ಕೆಳಗೆ ನೋಡಿದರೆ, ಹಸಿರು ಹೊಲ
ನದಿಯ ಹರಿವು, ಕೇಳುವ ಸದ್ದು ಚಂದ.
ಮರಗಳ ಮೇಲೆ, ಹಕ್ಕಿಗಳು ಹಾಡುತಿವೆ
ನಿಸರ್ಗದ ಅಂದ, ಎಲ್ಲರಿಗೂ ಇಷ್ಟ ll೦೨ll
ಜೀವನದ ಪಯಣ, ಹಕ್ಕಿಯಂತಿರಲಿ
ಕಷ್ಟಗಳು ಬಂದರೂ, ಧೈರ್ಯದಿಂದ ಮುನ್ನಡೆಯಲಿ.
ಯಶಸ್ಸಿನ ಶಿಖರ, ನಾವೂ ತಲುಪುವ
ಖುಷಿಯಿಂದ ಬಾಳುವ, ಎಲ್ಲರಿಗೂ ಒಳ್ಳೆಯದಾಗಲಿ ll೦೩ll
- ಶರಣೆ : ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ.




















