ಮಡಿಯ ಮಾಡಿ ಮುಡಿಗೆ
ಮಲ್ಲಿಗೆ ಇಟ್ಟೆ. ಅಡಿಗಡಿಗೆ
ನೆನೆದೂ ಕೈ ಮುಗಿದು ಬಿಟ್ಟೆ
ಜಂಗಮ ಓ ಶರಣು ಜಂಗಮ !
ಗುಡಿಯ ಮುಂದೆ ನಿನ್ನ ನುಡಿಯ
ಕೇಳಿದೆ. ಕಂಸಾಳೆ ಕಂಚು ಮೇಳ
ಹಾಡಿ- ಪಾಡಿ ನಿನ್ನ ಮಹಿಮೆ ಮೆರೆಸುವರಯ್ಯ.
ಜಂಗಮ ಓ ಶರಣು ಜಂಗಮ!
ನಿನ್ನ ದರುಶನಕೆ ಬಂದವ್ರೆ
ಹರಸು ಹಾಡು ನನ್ನ ತಂದೆ.
ಭಕ್ತ ಜನಕೆ ನಿನ್ನಲ್ಲೆ ಮುಕ್ತಿ
ದಯಪಾಲಿಸು ಸುಖ – ಶಾಂತಿ
ಜಂಗಮ ಓ ಶರಣು ಜಂಗಮ!
- ಭಾನುಮತಿ ವಿ. ಕನಕಪುರ




















