ದಾಳಿಂಬೆ ನೀನೆಷ್ಟು ಚಂದವಿರುವೆ ಅಂಬೆ
ಎಲ್ಲರ ಮನಸೆಳೆವ ಬಣ್ಣದಾ ಗೊಂಬೆ
ಕಾಳುಗಳಲಿ ಕಾಣುವೆ ದಂತಗಳಾ ಕೊಂಬೆ
ಜೋಡಿಸಲು ಆಗಿರುವೆ ನೀನೇ ಆಗುಂಬೆ
ಸೋರೆಯ ತುಣುಕುಗಳ ಸಿಂಗಾರದಲಿ
ನಗುತಿರುವೆ ಕ್ಯಾರೇಟ್ಟಿನ ಗಾಲಿಗಳಲಿ
ನಲಿದಿರುವೆ ಸುಲಲಿತೆಯ ಚಿತ್ತಾರದಲಿ
ತೇಲುತಿರುವೆ ಕಾವ್ಯದಾ ಲಹರಿಯಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















