ಬೆಂಗಳೂರು:ಕರ್ನಾಟಕ ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ರಾಷ್ಟೀಯ ಅರೋಗ್ಯ ಮಿಷನ್ (ಎನ್.ಎಚ್.ಎಂ) ಅಡಿಯಲ್ಲಿ ಒಳಗುತ್ತಿಗೆ ನೌಕರರಾಗಿ ಕರ್ನಾಟಕದ ಎಲ್ಲಾ ಜಿಲ್ಲಾ ಆಸ್ಪತ್ರೆ,ತಾಲ್ಲೂಕು ಆಸ್ಪತ್ರೆ,ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ದಿನಗೂಲಿ ನೌಕರರಿಗಿಂತ ಕಡಿಮೆ ವೇತನಕ್ಕೆ 15-20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಇವರ ಸ್ಥಿತಿಯನ್ನು ಯಾವ ಸರ್ಕಾರವಾಗಲೀ ಅಥವಾ ಅಧಿಕಾರಿಗಳಗಲೀ ಕೇಳುವವರಿಲ್ಲ ಈ ಎನ್.ಹೆಚ್.ಎಂ.ಸಿಬ್ಬಂದಿಗಳ ದೈಹಿಕ,ಮಾನಸಿಕ,ಆರ್ಥಿಕ ಪರಿಸ್ಥಿತಿ ಎಲ್ಲಾ ಹದಗೆಟ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ 15-20 ವರ್ಷದಿಂದ ಕಾದು ದಿನಾಂಕ 13-2-2023 ರಂದು ಮುಷ್ಕರಕ್ಕೆ ದುಮುಕಿದ ಇವರಿಗೆ 16 ದಿನವಾದರೂ ಇದುವರೆಗೆ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಈ ಮುಷ್ಕರದಲ್ಲಿ ಎನ್.ಹೆಚ್. ಎಂ.ಮಹಿಳಾ ಸಿಬ್ಬಂದಿಗಳು ಮತ್ತು ಅವರ ಹಸುಗೂಸುಗಳು ಸಹ ಪಾಲ್ಗೊಂಡಿದ್ದು ಈ ದೃಶ್ಯ ಮನ ಕುಲುಕುವಂತಿದೆ.ಇಷ್ಟಾದರೂ ಕೂಡಾ ಇನ್ನೂ ಕೂಡಾ ಇದಕ್ಕೆ ಸಂಬಂಧಿಸಿದವರು ಮಾತ್ರ ಈ ಕಡೆ ಗಮನಹರಿಸದಿರುವುದು ವಿಷಾದನೀಯ ಸಂಗತಿ.
ಕನಿಷ್ಠ ಮಾನವೀಯತೆಯ ದೃಷ್ಟಿಯಿಂದಲಾದರೂ ಇಲ್ಲಿ ಹೋರಾಟ ನಡೆಸುತ್ತಿರುವವರ ಕಡೆ ಸರ್ಕಾರ ಹಾಗೂ ಇವರಿಂದ ಇಲ್ಲಿಯವರೆಗೆ ಕೆಲಸ ಮಾಡಿಸಿಕೊಂಡ ಅಧಿಕಾರಿಗಳು ಒಮ್ಮೆ ಇವರ ನ್ಯಾಯಯುತ ಬೇಡಿಕೆ ಈಡೇರಿಸುವಂತಾಗಲಿ ಎನ್ನುವುದೇ ನಮ್ಮ ಕರುನಾಡ ಕಂದ ಪತ್ರಿಕೆಯ ಆಶಯ.
-ಕರುನಾಡ ಕಂದ