ಬಾನಂಗಳದ ಬೆಳದಿಂಗಳು,
ನಿಶ್ಶಬ್ದದಲಿ ಮೃದುವಾಗಿ ನಗುತಿದೆ
ನೀಲಾಕಾಶದ ಮಡಿಲಿನಲ್ಲಿ,
ಸ್ವಪ್ನಗಳನು ಶಾಂತವಾಗಿ ಬೀರುತಿದೆ //
ತಾರೆಗಳ ಜೊತೆ ಆಟವಾಡಿ,
ಮುಗುಳ್ನಗೆಯಲಿ ಹೊಳೆಯುತಿದೆ…
ಮನದೊಳಗಿನ ಮಂಕು ತೊಳೆದು,
ಹೊಸ ಆಶೆಯನು ತುಂಬುತಿದೆ…//
ಗಾಳಿಯ ಜೊತೆ ಮಾತಾಡುತ,
ರಾತ್ರಿ ಕಥೆಗಳನು ಹೇಳುತಿದೆ…
ಕತ್ತಲೆಯಲಿ ದಾರಿ ತೋರಿಸಿ,
ಬೆಳಕಿನ ಹಾದಿಯನು ಕಟ್ಟುತಿದೆ…//
ಓ ಬೆಳದಿಂಗಳೇ ನೀನೆ ಸಾಕ್ಷಿ,
ಮನದ ಕನಸುಗಳ ಹರಿವಿಗೆ…
ನೀ ಇರುವ ತನಕ ಭಯವೇ ಇಲ್ಲ,
ಜೀವನದ ಈ ಮೌನ ಪ್ರಯಾಣಕೆ //
ರಚನೆ :ಹನುಮಂತರಾವ್ ಬಿ. ನಾಗಪ್ಪಗೋಳ ಗೋಕಾಕ, ಜಿ. ಬೆಳಗಾವಿ.




















