
ಕೊಪ್ಪಳ/ ಯಲಬುರ್ಗಾ: ಭಗವಂತ ಸುಂದರವಾದ ಪರಿಸರ ಪ್ರಕೃತಿಯನ್ನು ನಮಗೆಲ್ಲರಿಗೂ ಕೊಟ್ಟಿರುತ್ತಾನೆ, ಆ ಭಗವಂತನ ಉಪಕಾರವನ್ನು ಸದಾ ಸ್ಮರಿಸುವ ಕಾಯಕ ನಮ್ಮದಾಗಬೇಕು ಎಂದು ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಅವರು ಅಗಿ ಹುಣ್ಣಿಮೆಯ ದಿನದ 81ನೇ ಶಿವಾನುಭವ ಗೋಷ್ಠಿಯಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡಿ, ಇನ್ನೊಬ್ಬರಿಗೆ ಕೆಡಕನ್ನು ಬಯಸದೆ ,ಅವರ ಮನಸ್ಸಿಗೆ ನೋವುಂಟು ಮಾಡಲಾರದೆ ಒಳಿತು ಮಾಡುವ ಕಾರ್ಯ ಮಾಡುವಲ್ಲಿ ಮುಂದಾಗಬೇಕು ಎಂದರು. ದಮ್ಮೂರಿನ ಶ್ರೀ ಭೀಮಾಂಬಿಕಾದೇವಿ ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರಮಠ ಸಾನಿದ್ಯ ವಹಿಸಿದ್ದರು. ಭಕ್ತನಾದೋಡೆ ಬಾಳೆಹಣ್ಣಿನಂತೆ ಇರಬೇಕು ಎಂಬ ವಚನದ ಸಾರಾಂಶದ ಬಗ್ಗೆ ಹಿರೇವಂಕಲಕುಂಟಾದ ಯೋಗ ಗುರು ಹರ್ಷಾನಂದ ಅವರು ಮಾತನಾಡಿ ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಬೇಕು ಶಿಕ್ಷಣ ಕಲಿತ ಮಕ್ಕಳು ಹಾಳಾಗಬಹುದು, ಸಂಸ್ಕಾರ ಕಲಿತ ಮಕ್ಕಳು ಎಂದೂ ಹಾಳಾಗುವುದಿಲ್ಲ ಎಂದರು. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸಿಮಿತವಾಗಬಾರದು ,ಗುರು ಹಿರಿಯಲ್ಲಿ ವಿನಯದಿಂದ ಬಾಗಿದಾಗ ಉನ್ನತ ಮಟ್ಟದಲ್ಲಿ ಬೆಳೆಯಲು ಸಾದ್ಯ ಎಂದು ದಮ್ಮೂರ ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹವಳಿ ಮಾತನಾಡಿದರು. ಈ ವೇಳೆ ಶರಣರಾದ ಶಂಕರಗೌಡ ಮಾಲಿಪಾಟೀಲ್, ನೀಲನಗೌಡ ಹೊಸಮನಿ, ನಿಂಗಪ್ಪ ಹಳ್ಳಿಕೇರಿ, ದುರಗಪ್ಪ ಮಕ್ಕಳ್ಳಿ, ಮಳಿಯಪ್ಪಯ್ಯ, ಅಲಿಸಾಬ ನದಾಫ್, ಹುಸೇನಸಾಬ ಹಿರೇಕೊಪ್ಪ, ಚಂದ್ರಶೇಖರ ಕೋಗಿಲೆ, ಶರಣಯ್ಯ ಬಳಗಾನೂರ, ದೇವಪ್ಪ ಹಡಪದ, ಪಾಲಾಕ್ಷಪ್ಪ ಪತ್ತಾರ , ನಾಗನಗೌಡ ಮಾಲಿಪಾಟೀಲ್, ಸಂಗಪ್ಪ ಹುಣಸಿಹಾಳ, ಫಕೀರಗೌಡ ಮಾ.ಪಾಟೀಲ, ಮರೆಗೌಡ ಸಂಗನಾಳ, ಬಾಳಪ್ಪ ಜರಕುಂಟಿ, ಹನುಮಪ್ಪ ರಾವಣಕಿ, ಯಮನಗೌಡ್ರ ಮಾಲಿ ಪಾಟೀಲ ,ಕಾವೇರಿ ನಾವಡೆ, ಅಂಬಿಕಾ ಎನ್,ಶರಣಪ್ಪ ಭೂತಲ್, ಕಾಳೇಶ ಕಮ್ಮಾರ, ಶ್ರೀಕಾಂತಗೌಡ ಮಾಲಿಪಾಟೀಲ್, ಷಣ್ಮುಖಪ್ಪ ಕೋವಿ, ಗುನ್ನೆಪ್ಪ ಚೆನ್ನದಾಸರ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ




















