ಬಳ್ಳಾರಿ / ಕಂಪ್ಲಿ : ಇತ್ತೀಚೆಗೆ ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಕುಳಿತ ಒಟ್ಟು 63 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಬಿ.ನೀಲಾವತಿ 583(ಶೇ.97.16), ಹೆಚ್.ಪಿ.ನಕ್ಷತ್ರ 558(ಶೇ.93) ಸಹನಾ 503(ಶೇ.83.83) ಹಾಗೂ
ವಾಣಿಜ್ಯ ವಿಭಾಗದಲ್ಲಿ ಭುವನೇಶ್ವರಿ 471(ಶೇ.78.05), ತೇಜ್ಕುಮಾರ 437(ಶೇ.72.83),
ಖಾದರ್ ವಲಿ 420(ಶೇ.70) ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇದರ ಜೊತೆಗೆ ಬಿ.ನೀಲಾವತಿ, ಹೆಚ್.ಪಿ.ನಕ್ಷತ್ರ ರಾಜ್ಯಶಾಸ್ತ್ರದಲ್ಲಿ ತಲಾ 100ಕ್ಕೆ 100ಅಂಕ ತೆಗದುಕೊಳ್ಳುವ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರಾದ ಕೆ.ಬಿ.ವೀರೇಶ, ಉಪನ್ಯಾಸಕರು, ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















