ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಂಜಾರರು ಕಷ್ಟ ಜೀವಿಗಳು ಎಂದರು ಇಂಡಿ ಶಾಸಕರಾದ ಯಶವಂತರಾಯಗೌಡ್ ಪಾಟೀಲ್

ಬಂಜಾರ ಸಮುದಾಯದ ಮಕ್ಕಳಿಗೆ ವಸತಿಶಾಲೆಗಳು ಅತಿ ಅವಶ್ಯಕವಾಗಿವೆ. ಶಿಕ್ಷಣ ಇದ್ದಲ್ಲಿ ಸಮುದಾಯ ಮುಂದೆ ಬರಲು ಸಾಧ್ಯ. ಈ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಲಂಬಾಣಿ ಸಮುದಾಯದ ಮಕ್ಕಳಿ ಗಾಗಿಯೇ ಸರ್ಕಾರ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು, ಗುಣಮಟ್ಟದ ಶಿಕ್ಷಣ ನೀಡಬೇಕು. ಆ ಕೆಲಸ ವನ್ನು ಮು೦ದಿನ ದಿನದಲ್ಲಿ ಅರ್ಜುನ ಲಮಾಣಿ ಹಾ ಗೂ ನಾನು ಸೇರಿ ಮಾಡುತ್ತೇವೆ ಎ೦ದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿ 21.50 ಕೋ ಟಿ ವೆಚ್ಚದಲ್ಲಿ ನಿರ್ಮಿಸಿದ ಬಂಜಾರ ಸಮುದಾಯ ಭವನವನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಬಂಜಾರ ಸಮುದಾಯ ನನ್ನ ರಾಜಕಾ ರಣದಲ್ಲಿ 35 ವರ್ಷಗಳಿಂದ ನನ್ನ ಬೆನ್ನು ಹಿಂದೆ ಇದ್ದು, ಆಶೀರ್ವಾದ ಮಾಡಿದೆ. ಅವರ ಉಪಕಾರವ ನ್ನು ಮುಟ್ಟಿಸುವ ಕೆಲಸ ಎಷ್ಟು ಮಾಡಿದರೂ ಕಡಿಮೆಯೇ. ಈ ಕಾರ್ಯವನ್ನು ಭವಿಷ್ಯದಲ್ಲಿಯೂ ಮು೦ದುವರಿಸುತ್ತೇನೆ.ಸರ್ಕಾರದ ಕಾಮಗಾರಿಗಳನ್ನು ಜನರಿಗೆ ಮುಟ್ಟಿಸಿದರೆ ಜನಮಾನಸದಲ್ಲಿ ಕಾಮಗಾರಿ ಕಾರಣರಾದವರ ಹಾಗೂ ಗುತ್ತಿಗೆದಾರರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಒಳ್ಳೆಯ ಗುಣಮಟ್ಟದ ಬಂಜಾರ ಭವನ ನಿರ್ಮಿಸಿದ
ಗುತ್ತಿಗೆದಾರರಿಗೆ ತಮ್ಮೆಲ್ಲರ ಪರವಾಗಿ ಅಭಿನ೦ದಿಸುವುದು ನನ್ನ ಧರ್ಮ, ಬಂಜಾರ ಸಮುದಾಯದ ನಡವಳಿಕೆ, ಇನ್ನೊಬ್ಬರಿಗೆ ಪ್ರೀತಿ ತೋರುವ ರೀತಿ, ಗೌರವಿಸುವ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಮು೦ಬರುವ ದಿನದಲ್ಲಿ ಬಂಜಾರ ಭವನದಿಂದ ವಿಜಯಪುರ ಮುಖ್ಯ ರಸ್ತೆಯವರೆಗೆ ರಸ್ತೆ ನಿರ್ಮಾಣ ಮಾಡಿಸುವ ಭರವಸೆ ನೀಡಿದ ಅವರು, ಬಂಜಾರ ಸಮುದಾಯದ ಕುಲಬಾಂಧವರು ಸರ್ವ ಸಮಾಜ ದೊ೦ದಿಗೆ ಪ್ರೀತಿ, ವಿಶ್ವಾಸ- ಸಾಮರಸ್ಯ ಜೀವನ
ಸಾಗಿಸುವ ಮೂಲಕ ನಮ್ಮ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ಬಂಜಾರರು ಕಷ್ಟ ಜೀವಿಗಳು, ಅವರು ತಾಳ್ಮೆ ಹಾಗೂ ಸಹಕಾರಕ್ಕೆ ಹೆಸರಾಗಿದ್ದಾರೆ. ಈ ಮುಂಚೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಬಂಜಾರ ಸಮುದಾಯದ ಸರ್ವಾ೦ಗೀಣ ಪ್ರಗತಿಗೆ ಸಾಕಷ್ಟು ಪ್ರಗತಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಬಂಜಾರ ಸಮಾಜದ ಎಸ್‌ಸಿ ಸೇರ್ಪ ಡೆಗಾಗಿ ಶ್ರಮಿಸಿದ ಕೆ. ಟಿ. ರಾಠೋಡ ಹಾಗೂ ಎಲ್ ಎನ್.ನಾಯಿಕ ಮತ್ತು ಅಂದಿನ ಕಾಂಗ್ರೆಸ್ ಮುಖ್ಯ
ಮಂತ್ರಿ ಡಿ.ದೇವರಾಜ ಅರಸ್ ಇವರು ಮಾಡಿದ ಕಾರ್ಯವನ್ನು ಬಂಜಾರ ಸಮುದಾಯ ಸೂರ್ಯ, ಚಂದ್ರ ಇರುವವರೆಗೂ ಸ್ಮರಿಸಬೇಕು ಎ೦ದರು.

ಇತ್ತೀಚೆಗೆ ಅಪಘಾತದಲ್ಲಿ ಹಾನಿಗೀಡಾದ ಸಂತ ಸೇವಾಲಾಲ್ ವೃತ್ತ ಹಾಗೂ ಪುತ್ಥಳಿಯ ಮರು ನಿರ್ಮಾಣಕ್ಕೆ ಕ 10 ಲಕ್ಷ ನೀಡಿದ್ದು, ಮುಂದೆ ಅದಕ್ಕೆ ತಗಲುವ ಎಲ್ಲ ಖರ್ಚು ನೀಡುವುದಾಗಿ ಇದೇ ಸಂದರ್ಭದಲ್ಲಿ ಶಾಸಕ ಭರವಸೆ ನೀಡಿದರು.

ವಿಧಾನ ಪರಿಷತ್‌ ಮುಖ್ಯ ಸಚೇತಕ ಪ್ರಕಾಶ ರಾಠೋಡ ಮಾತನಾಡಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನು ಮಾಡಿರುವುದು ಬಿಜೆಪಿಯವರು ಅಲ್ಲ. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿಯೇ ಈ ಕಾರ್ಯ ಮಾಡಲಾಗಿದೆ. ಉಳುವವನೇ ಭೂಮಿಯ ಒಡೆಯ, ಜಾರಿಗೊಳಿಸಿದ್ದು, ಸಂತ ಸೇವಾಲಾಲ್ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಲು ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ .ಬಂಜಾರ ಸಮುದಾಯಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯ ಎ೦ದು ಹೇಳಿದರು. ಈ ಸಂದರ್ಭದಲ್ಲಿ ಸೋಮನಿಂಗ ಮಹಾರಾಜರು, ಪ್ರಕಾಶ ಮಹಾರಾಜರು ಸಾನ್ನಿಧ್ಯ ವಹಿಸಿದರು. ತಾ.ಪಂ ಮಾಜಿ ಅಧ್ಯಕ್ಷ ಶೇಖರ ನಾಯಕ, ವಿಶ್ವನಾಥ ಚವ್ಹಾಣ, ಶಂಕರ ಚವ್ಹಾಣ, ಮಲ್ಲು ನಾಯಿಕ, ಮಲ್ಲನಗೌಡ ಪಾಟೀಲ ಶ್ರೀಕಾಂತ ಕುಡಿಗನೂರ, ಜೆಟ್ಟೆಪ್ಪ ರವಳಿ, ಜಾವೀದ್ ಮೋಮಿ ನ್, ಪ್ರಶಾಂತ ಕಾಳೆ, ಚಂದ್ರಶೇಖರ ರೂಗಿ,
ಧರ್ಮರಾಜ ವಾಲೀಕಾರ, ಜೀತಪ್ಪ ಕಲ್ಯಾಣಿ, ಸತೀಶ ಕುಂಬಾರ, ಶ್ರೀಕಾಂತ ಚವ್ಹಾಣ, ನಿರ್ಮಲಾ ತಳಕೇರಿ, ಸುನೀಲ ಮದ್ದಿನ, ಯಮುನಾಜಿ ಸಾಳುಂಕೆ, ಅರ್ಜುನ ಲಮಾಣಿ, ಜೈರಾಮ ಚವ್ಹಾಣ, ರಮೇಶ ರಾಠೋಡ, ಪ್ರೊ.ವಿಜಯಕುಮಾರ ರಾಠೋಡ, ಪಿಂಟು ರಾಠೋಡ, ಗೋವಿಂದ ರಾಠೋಡ, ಧರ್ಮು ರಾಠೋಡ, ಇತರರು ಇದ್ದರು.

ವರದಿ. ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ