ಬೆಂಗಳೂರು : ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಈ ಬಾರಿಯ ಶೈಕ್ಷಣಿಕ ವರ್ಷವು ಮೇ 29, 2026 ರಿಂದ ಆರಂಭವಾಗಲಿದೆ.
ವೇಳಾಪಟ್ಟಿಯ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:
ಶಾಲಾ ಅವಧಿಗಳು ಮತ್ತು ದಿನಗಳು
ಶಾಲೆ ಆರಂಭ: ಮೇ 29, 2026.
ಮೊದಲ ಅವಧಿ: ಮೇ 29 ರಿಂದ ಅಕ್ಟೋಬರ್ 2, 2026 ರವರೆಗೆ.
ಎರಡನೇ ಅವಧಿ: ಅಕ್ಟೋಬರ್ 22 ರಿಂದ ಏಪ್ರಿಲ್ 2027 ರವರೆಗೆ.
ಒಟ್ಟು ಕೆಲಸದ ದಿನಗಳು: ಈ ವರ್ಷ ಒಟ್ಟು 245 ಶಾಲಾ ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದೆ.
ರಜೆಗಳ ವಿವರ
ಒಟ್ಟು ರಜೆ ದಿನಗಳು: ವರ್ಷದಲ್ಲಿ ಒಟ್ಟು 119 ದಿನಗಳು ರಜೆ ಇರಲಿವೆ.
ದಸರಾ ರಜೆ: ಅಕ್ಟೋಬರ್ 3 ರಿಂದ ಅಕ್ಟೋಬರ್ 21, 2026 ರವರೆಗೆ (ಒಟ್ಟು 19 ದಿನಗಳು) ದಸರಾ ರಜೆ ಘೋಷಿಸಲಾಗಿದೆ.
ಚಟುವಟಿಕೆಗಳ ಹಂಚಿಕೆ :
ಶೈಕ್ಷಣಿಕ ವರ್ಷದ ಒಟ್ಟು ದಿನಗಳಲ್ಲಿ ವಿವಿಧ ಚಟುವಟಿಕೆಗಳಿಗೆ ಸಮಯ ನಿಗದಿಪಡಿಸಲಾಗಿದೆ:
ಪರೀಕ್ಷೆ ಮತ್ತು ಮೌಲ್ಯಾಂಕನ: 26 ದಿನಗಳು.
ಪಠ್ಯೇತರ ಚಟುವಟಿಕೆಗಳು: 24 ದಿನಗಳು.
ಸ್ಥಳೀಯ ರಜೆಗಳು: ಶಾಲೆಗಳ ಸ್ಥಳೀಯ ಅವಶ್ಯಕತೆಗಳಿಗೆ ತಕ್ಕಂತೆ ಕೆಲವು ರಜೆಗಳನ್ನು ನೀಡಲು ಅವಕಾಶವಿರುತ್ತದೆ.
ವರದಿ ಭರ್ಮಪ್ಪ ಮಾಗಳದ




















