ಶಿವಮೊಗ್ಗ: ಭಗೀರಥ ಒಬ್ಬ ಮಹಾನ್ ಪುರುಷ ಗಂಗೆಯನ್ನು ಧರೆಗಿಳಿಸಿ ಭೂಮಂಡಲದಲ್ಲಿ ಇರುವಂತಹ ಎಲ್ಲಾ ಜೀವಿಗಳಿಗೆ ನೀರು ಉಣಿಸಿದಂತಹ ಮಹಾನ್ ಪುರುಷ. ಭಗೀರಥ ಜಯಂತೋತ್ಸವದ ಅಂಗವಾಗಿ ಭಗೀರಥ ಕಪ್ ಶಿವಮೊಗ್ಗದ ಎನ್ ಇ ಎಸ್ ಮೈದಾನದಲ್ಲಿ
ದಿ. 09:05:2026 ರಿಂದ ದಿ. 10:05:2026 ಆಯೋಜಿಸಲಾಗಿದ್ದು ಪರಮಪೂಜ್ಯ ಶ್ರೀ ಪುರುಷೋತ್ತಮ ಪುರಿ ಮಹಾಸ್ವಾಮಿಗಳ ಆಶೀರ್ವಾದ ಅಡಿಯಲ್ಲಿ 4ನೇ ವರ್ಷದ ಅದ್ದೂರಿ ಭಗೀರಥ ಕಪ್ 2 ದಿನಗಳ ಕಾಲ ನಡೆಯಲಿದ್ದು ಶಿವಮೊಗ್ಗ ಜಿಲ್ಲೆಗಳಿಂದ 13 ತಂಡಗಳು ಆಗಮಿಸಲಿದ್ದು ನಾಳೆ ಬೆಳಗ್ಗೆ 7:30ಕ್ಕೆ ಪ್ರಾರಂಭವಾಗಲಿದೆ. ಸಮಾಜದ ಜಿಲ್ಲಾಧ್ಯಕ್ಷರು ಚಾಲನೆ ನೀಡಲಿದ್ದಾರೆ. ಜೊತೆಗೆ ಉಪ್ಪಾರ ನಿಗಮ ಅಧ್ಯಕ್ಷರು, ಜನ ಪ್ರತಿನಿಧಿಗಳು, ಮಾಜಿ ಮಹಾಪೌರರು, ಕಾರ್ಪೊರೇಟರ್, ಸಮಾಜದ ಸರ್ಕಾರಿ ನೌಕರರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲೆಯಲ್ಲಿರುವಂತಹ ಸಮಸ್ತ ಕುಲಬಾಂಧವರು ಆತ್ಮೀಯ ಸ್ನೇಹಿತರುಗಳು ಹಾಗೂ ಶಿವಮೊಗ್ಗ ಜಿಲ್ಲಾ ಯಜಮಾನರುಗಳು ಹಾಗೂ ಗೌಡರುಗಳು ಸಹ ಆಗಮಿಸಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಸ್ಪೋರ್ಟ್ಸ ಅಕಾಡೆಮಿಯ ಅಧ್ಯಕ್ಷರಾದ ಮುರಳಿ ಹೆಚ್ ಸಣ್ಣಕ್ಕಿರವರು ತಿಳಿಸಿದ್ದಾರೆ. ಕಾರ್ಯಕ್ರಮದ ಆಯೋಜಕರುಗಳಾದ ಮುರಳಿ ಹೆಚ್ ಸಣ್ಣಕ್ಕಿ, ಗುರುರಾಜ್, ಕಾರ್ತಿಕ್, ಮಂಜುನಾಥ್, ಭರತ್, ನವೀನ ,ಮಂಜು ಸೇರಿದಂತೆ ಮುಂತಾದವರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















