ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹನೂರು ತಾಲೂಕಿನ ಶೆಟ್ಟಳ್ಳಿಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಆರ್.ನರೇಂದ್ರ

ಹನೂರು:ತಾಲೂಕಿನ ಶೆಟ್ಟಳ್ಳಿ ಗ್ರಾಮದಿಂದ ಕುರಟ್ಟಿ ಹೊಸೂರು ಗ್ರಾಮಕ್ಕೆ ಸಂಬಂಧ ಕಲ್ಪಿಸುವ ರಸ್ತೆಗೆ ಶಾಸಕರಾದ ಆರ್.ನರೇಂದ್ರರವರು ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿ ವಿಶೇಷ ಅನುದಾನದಡಿಯೇ ಈ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಸುಮಾರು ಒಂದುವರೆ ಕಿಲೋಮೀಟರ್ ರಸ್ತೆಗೆ ಒಂದುವರೆ ಕೋಟಿ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ಮಾಡಿದ್ದು ಉತ್ತಮ ರೀತಿಯಲ್ಲಿ ರಸ್ತೆ ಇರಬೇಕೆಂದು ತಿಳಿಸಿದರು. ಸರ್ಕಾರದಿಂದ ವಿಶೇಷ ಅನುದಾನ 25 ಕೋಟಿ ಬಂದಿದ್ದು ಅದರಲ್ಲಿ ಆರ್ ಡಿ ಪಿ ಆರ್ ಗೆ 10 ಕೋಟಿ, ಉಳಿದ 15 ಕೋಟಿಯನ್ನು ಪಿಡಬ್ಲ್ಯೂಡಿ ರಸ್ತೆಗಳಿಗೆ ಹಣವನ್ನು ವಿನಿಯೋಗಿಸಿದ್ದು, ಮಾಟಳ್ಳಿ ಗ್ರಾಮದಲ್ಲಿ ನಾಲ್ಕುವರೆ ಕಿಲೋಮೀಟರ್ ರಸ್ತೆಗೆ ನಾಲ್ಕುವರೆ ಕೋಟಿ ಹಣ, ಹಾಗೂ ಬಂಡಳ್ಳಿಯಿಂದ ತೆಳ್ಳನೂರು ರಸ್ತೆಗೆ ಏಳುವರೆ ಕೋಟಿ ಹಣವನ್ನು ನೀಡಲಾಗಿದೆ ಇನ್ನು 3-4 ದಿನಗಳಲ್ಲಿ ಇದರ ಪ್ರಕ್ರಿಯೆ ಮುಗಿದು ಇದರ ಗುದ್ದಲಿ ಪೂಜೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಕಳೆದ ಮೂರು ನಾಲ್ಕು ವರ್ಷಗಳಿಂದ ಪಿಡಬ್ಲ್ಯೂಡಿ ಇಲಾಖೆಯಿಂದ ಯಾವುದೇ ಅನುದಾನ ನೀಡಿಲ್ಲ ನಮ್ಮ ಕ್ಷೇತ್ರ ಅತ್ಯಂತ ದೊಡ್ಡ ಕ್ಷೇತ್ರ ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಎಂಟು ಕ್ಷೇತ್ರ ದಷ್ಟು ಉದ್ದವಿದೆ. ಇಡೀ ಕ್ಷೇತ್ರಕ್ಕೆ ಕುಡಿಯಲು ಕಾವೇರಿ ನೀರಿನ ವ್ಯವಸ್ಥೆಯನ್ನು ಮಾಡಿದ್ದೇನೆ, ಹಾಗೂ ಸರ್ಕಾರವು ನಮ್ಮ ಕ್ಷೇತ್ರಕ್ಕೆ ಅನುದಾನವನ್ನು ನೀಡುತ್ತಿಲ್ಲ ಎಂದು ತಿಳಿಸಿದರು. ನಾನು ಮೂರು ಬಾರಿ ಶಾಸಕರಾಗಿದ್ದು ಸುಮಾರು 25ರ ವರ್ಷಗಳಿಂದನೂ ರಾಜಕೀಯವನ್ನು ಬಲ್ಲೆ, ಆದರೆ ಯಾವುದೇ ಸರ್ಕಾರವು ತಾರು ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿರುವುದು ನನ್ನ ಜೀವನದಲ್ಲಿ ನೋಡಿಲ್ಲ, ಇಂತಹ ಸರ್ಕಾರವನ್ನು ನಾವು ನೋಡಿಯೇ ಇಲ್ಲ ಎಂದು ಸರ್ಕಾರದ ವಿರುದ್ಧ ವಾಕ್ ಸಮರವನ್ನು ಮಾಡಿದರು. ಈ ಸಂಧರ್ಭದಲ್ಲಿ ಗ್ರಾಮಸ್ಥರು ಹಾಗೂ ಗುತ್ತಿಗೆದಾರರಾದ ಕೆ ಮಲ್ಲು ಇನ್ನಿತರರು ಇದ್ದರು.

ನಂತರ ಇದೆ ಸಂದರ್ಭದಲ್ಲಿ ಪತ್ರಕರ್ತರನ್ನು ವ್ಯಂಗ್ಯ ಮಾಡಿದ ಶಾಸಕ ಆರ್ ನರೇಂದ್ರ

ಡಾಂಬರು ರಸ್ತೆಗೆ ಗುದ್ದಲಿ ಪೂಜೆ ಮಾಡುವ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪತ್ರಕರ್ತರನ್ನು ವ್ಯಂಗ್ಯ ಮಾಡಿ ಮಾತನಾಡಿರುವ ಘಟನೆ ನಡೆದಿದೆ.

ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಶಾಸಕ ಆರ್ ನರೇಂದ್ರ ರವರಿಂದ ಗುದ್ದಲಿ ಪೂಜೆ ನಡೆಯುವ ಸಂದರ್ಭದಲ್ಲಿ ಪತ್ರಕರ್ತರು ವಿಡಿಯೋ ಫೋಟೋ ತೆಗೆಯುತ್ತಿದ್ದರು ಇದನ್ನು ಗಮನಿಸಿದ ಶಾಸಕ ಆರ್ ನರೇಂದ್ರರವರು
ವಿಡಿಯೋ ಚಿತ್ರೀಕರಣ ಮಾಡುತಿದ್ದ ಮಾದ್ಯಮದವರನ್ನು ಕಂಡು ನೀವು ಮಾದ್ಯಮದವರು ಇಷ್ಟು ಜನ ಇದ್ದೀರಾ ಎಂದು ಮಾಧ್ಯಮದವರನ್ನು ಏಣಿಕೆ ಮಾಡಿ. ನಾನು ಕೂಡಾ ನಿಮ್ಮ ಜೊತೆಗೆ ಬರುವೆನೆಂದು ಮಾಧ್ಯಮದವರಿಗೆ ವ್ಯಂಗ್ಯವಾಡಿದರು.

ಜೊತೆಗೆ ಭೂಮಿಪೂಜೆ ಕಾರ್ಯಕ್ರಮವನ್ನು ವರದಿ ಮಾಡಿ ಎಂದು ಹೇಳಿದರು ಆದರೆ ನನ್ನ ವರದಿಗಳು ಪ್ರಕಟಣೆ ಆಗುತ್ತಿಲ್ಲ ಎಂದು ಮಾಧ್ಯಮದವರಿಗೆ ಬಹಿರಂಗವಾಗಿ ಹೇಳಿ ಮುಜುಗರಕ್ಕೀಡು ಮಾಡಿದರು.

ವರದಿ :-ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ