ಬೆಳಗಾವಿಯಲ್ಲಿ ಲಕ್ಷಾಂತರ ಅಭಿಮಾನಿಗಳ ಮಧ್ಯೆ ಸುಮಾರು 10.5 ಕಿಲೋ ಮೀಟರ್ ರೋಡ್ ಶೋ ಮಾಡುವುದರ ಮೂಲಕ ಹಳೆ ಪಿ.ಬಿ ರಸ್ತೆಯ ಮೂಲಕ ಎರಡು ಬದಿಯ ಅಪಾರ ಅಭಿಮಾನಿಗಳ ಮಧ್ಯೆ ಹೂವುಗಳ ಸುರಿಮಳೆಗಳ ನಡುವೆ ಮಾಲಿನಿ ಸಿಟಿಯ ಭವ್ಯ ಸಮಾರಂಭದಲ್ಲಿ ಮಾತನಾಡುತ್ತಾ ಇಂದು ಬೆಳಗಾವಿಯ ಜನರು ನೀಡಿದ ಆತಿತ್ಯವನ್ನು ಅಭಿವೃದ್ಧಿಯ ಮೂಲಕ ಈ ನೆನಪನ್ನು ಅಜರಾಮರಗೊಳಿಸುವೆ ಎಂದು ಹೇಳುತ್ತಾ ರೈಲು ನಿಲ್ದಾಣ ಉದ್ಘಾಟನೆ ರೈತರ ಖಾತೆಗಳಿಗೆ 16000 ಸಾವಿರ ಕೋಟಿ ರೂಪಾಯಿಯನ್ನು ದೇಶದ ಎಲ್ಲಾ ರೈತರು ಇಂದು ಬೆಳಗಾವಿಯೊಂದಿಗೆ ಗುರುತಿಸಿಕೊಳ್ಳುವ ಸೌಭಾಗ್ಯ ಈ ಪುಣ್ಯ ನೆಲ ಸಾಕ್ಷಿಯಾಗಿದೆ ಎಂದು ಹೇಳಿದರು ರೈತರಿಗಾಗಿ ಬಜೆಟ್ ಮಂಡನೆ ನಮ್ಮ ಸರ್ಕಾರ ಐದು ಪಟ್ಟು ಹೆಚ್ಚು ಮಾಡಿದೆ ಎಂದು ಹೇಳಿದರು ಮುಂಬರುವ ಚುನಾವಣೆಯಲ್ಲಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡುವ ಸದವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ನಮ್ಮ ಸರ್ಕಾರ ಪ್ರತಿ ಮನೆಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಜಲಜೀವನ ಮಿಷನ್ ಹಾಗೂ ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಉಚಿತ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿ ಮೋದಿ ಸರ್ಕಾರ ಇಂದು ಜಗತ್ತಿನ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ ಇಂದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು ಇನ್ನು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ ಜನರು 2014 ರಿಂದ ಮೋದಿಯವರನ್ನು ನೋಡುವ ಕನಸು ನನಸಾಗಿದೆ ಎಂದು ಹೇಳಿದರು ಇನ್ನು ಬೆಳಗಾವಿ ಉತ್ತರ.ದಕ್ಷಿಣ ಗ್ರಾಮೀಣ.ಖಾನಾಪುರ ವಿಧಾನಸಭಾ ಕ್ಷೇತ್ರಗಳ ಜನರಿಗೆ ಬಸ್ ಸೌಲಭ್ಯ ಮಾಡಿ ಭಾರತೀಯ ಜನತಾ ಪಕ್ಷದ ಬಲಾಬಲದ ಪ್ರದರ್ಶನ ಯಶಸ್ವಿಯಾಯಿತು ಎಂಬುವುದರಲ್ಲಿ ಅನುಮಾನವಿಲ್ಲ ಕಾರಣ ಅಪಾರವಾದ ಜನಸಮೂಹವೇ ಇದಕ್ಕೆ ಸಾಕ್ಷಿಯಾಗಿತ್ತು.
ವರದಿ- ದಿನೇಶಕುಮಾರ ಅಜಮೇರಾ