ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಗಳಖೋಡದಲ್ಲಿ 100 ನೇ ಶಿವಾನುಭವ ತತ್ವದರ್ಶನ – ಅಧಿಕ ಮಾಸದ ಆರಂಭ ಇಂದು

ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಪರಮಪೂಜ್ಯ ಶ್ರೀ ಶರಣಬಸವ ಶಾಸ್ತ್ರಿಗಳ ಸಾರಥ್ಯದಲ್ಲಿ ನಡೆದು ಬಂದಿರುವ “ತತ್ವದರ್ಶನ”- “ಶಿವಾನುಭವ” ತಿಂಗಳ ಕಾರ್ಯಕ್ರಮವು ಇಂದು ದಿ. 17ರಂದು ಸಂಜೆ 6:30ಕ್ಕೆ ನೂರರ ಮಾಸಿಕ ಸಂಭ್ರಮವನ್ನು ಆಚರಿಸಿಕೊಳ್ಳಲು ಸಿದ್ಧವಾಗಿದೆ. ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿದಿನ ನಿತ್ಯ ತತ್ವ ಚಿಂತನ. ಭಕ್ತಿ ಬೆಳಗು ಕಾರ್ಯಕ್ರಮ .ವಾರಕ್ಕೊಮ್ಮೆ ರವಿವಾರದ ಸತ್ಸಂಗ. ತಿಂಗಳಿಗೊಮ್ಮೆ ಶಿವಾನುಭವ. ತತ್ವದರ್ಶನ ಮಾಸಿಕ ಕಾರ್ಯಕ್ರಮ. ಮೂರು ತಿಂಗಳಿಗೊಮ್ಮೆ ಕನಕ ಪುರಂದರ ಬಸವಾದಿ ಶರಣರ ಚಿಂತನ ತ್ರೈಮಾಸಿಕ ಕಾರ್ಯಕ್ರಮ.ಹೀಗೆ ನಿರಂತರ ಶರಣರ. ಸಂತರ. ಜಯಂತಿಗಳನ್ನು ಆಚರಿಸುತ್ತಾ ಗ್ರಾಮದಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಪ್ರತಿಷ್ಠಾನವು ಮಾಡುತ್ತಿದೆ. ಇಂದು ರವಿವಾರ ಸಂಜೆ 6.30 ಕ್ಕೆ ಶ್ರೀಮಹಾಳಿಂಗೇಶ್ವರ ದೇವಸ್ಥಾನದ ಪೂಜ್ಯ ಶ್ರೀ ಗುರುಪ್ರಸಾದ್ ಸ್ವಾಮೀಜಿ ಅವರ ಸಮ್ಮುಖದಲ್ಲಿ ನೂರನೇ ಮಾಸಿಕ ಕಾರ್ಯಕ್ರಮ ಪ್ರಾರಂಭಗೊಳ್ಳುವುದು.ಇದೆ ಸಂದರ್ಭದಲ್ಲಿ “ಪುರುಷೋತ್ತಮ” ಅಧಿಕ ಮಾಸದ ಕಾರ್ಯಕ್ರಮವು ಆರಂಭಗೊಳುವುದು.
ಪ್ರತಿ ದಿನ ಬೆಳಗ್ಗೆ ಶ್ರೀ ಸಿದ್ಧಾರೂಢರ ಆರೂಢರ ಅಭಿಷೇಕ.ಪಾರಾಯಣ.ಭಜನೆ. ಮಂಗಲ.ಪ್ರತಿದಿನ ಸಂಜೆ 8 ರಿಂದ 9 ರ ವರೆಗೆ ಆಧ್ಯಾತ್ಮಿಕ ಚಿಂತನ ಜರುಗುವುದು ಈ ಎಲ್ಲಾ ಕಾರ್ಯಕ್ರಮಗಳು ಭಾರತಿ ಆಶ್ರಮದ ಪೂಜ್ಯರಾದ ಶ್ರೀ ಶರಣಬಸವ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ಜರುಗುವುದೆಂದು ಪ್ರತಿಷ್ಠಾನ ಮುಖಂಡರಾದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಂಕರಗೌಡ ಪಾಟೀಲ ಹಾಗೂ ಎಲ್. ಶ್ರೀನಿವಾಸ್ ಪ್ರಸಾದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!