ಪೋಷಿಸದೆ ಬಯಲಲಿ ಸದಾ ಅರಳುವ ಹಳದಿ ಪುಷ್ಪಗಳು
ಬೃಹತ್ ಗಿಡದ ಗೊಂಚಲಲಿ ನಲಿವ
ಬಿಳಿ ಹೂಗಳು
ಅಧಿಕ ಕಬ್ಬಿಣಾಂಶದ ಸಂಜೀವಿನಿ ನುಗ್ಗೆ ಸೊಪ್ಪಿನ ಎಲೆಗಳು
ನಡುವಲಿ ಪಂಚದಳದ ಪುಟ್ಟ ಪುಟ್ಟ ಪಂಚ ಶ್ವೇತ ನಕ್ಷತ್ರಗಳು
ಮಿನುಗಿವೆ ಇಂದು ಸುಲಲಿತ ಕಟ್ಟೆಯ ಚಿತ್ತಾರವಾಗಿ
ಹೊಮ್ಮಿದೆ ಲಘುಕಾವ್ಯ ಸಾಹಿತ್ಯ ಅಭಿಮಾನಿಗಳಿಗಾಗಿ
ಸುಪ್ರಭಾತದಲಿ ಬರುತಿದೆ ಸಹೃದಯ ಬಂಧುಗಳಿಗಾಗಿ
ನವ ನವೋಲ್ಲಾಸದ ಚೈತನ್ಯವ ಆಸ್ವಾದಿಸುವುದಕಾಗಿ
- ಲಲಿತಾ ಕೆ ಆಚಾರ್, ಬೆಂಗಳೂರು




















