ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗ್ರಾಮಸ್ಥರ ಒಗ್ಗಟ್ಟುನಿಂದ ಸಹಕಾರ ಸಂಘಗಳ ಬೆಳವಣಿಗೆ: ಬಸವರಾಜ್ ಯರದೊಡ್ಡಿ

ಯಲಬುರ್ಗಾ : ತಾಲೂಕಿನ ರ.ಬ.ಕೊ. ವಿಜಯನಗರ ಜಿಲ್ಲೆ ಹಾಲು ಒಕ್ಕೂಟ ಬಳ್ಳಾರಿ ಯಲಬುರ್ಗಾ ಉಪ ಕಚೇರಿಯಲ್ಲಿ ಯಲಬುರ್ಗಾ ಮತ್ತು ಕುಕುನೂರು ತಾಲೂಕಿನ 9 ಹೊಸ ಸಂಘಗಳಿಗೆ ಎನ್‌ಪಿಡಿಡಿ ಯೋಜನೆಯೆಲ್ಲಿ ಒಕ್ಕೂಟದ ಅನುದಾನದಲ್ಲಿ ನೀಡಲಾದ ಸಂಘದ ಹಾಲು ಶೇಖರಣ ಪರಿಕರಗಳನ್ನು ಒಕ್ಕೂಟದ ನಿರ್ದೇಶಕರಾದ ಶ್ರೀಮತಿ ಕಮಲಮ್ಮ ಲಕಮಾಪುರವರ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು, ನೇತೃತ್ವದಲ್ಲಿ ಸಂಘಗಳ ಕಾರ್ಯದರ್ಶಿಗಳಿಗೆ ವಿತರಣೆ ಮಾಡಲಾಯಿತು.
ನಂತರದಲ್ಲಿ ಕುಷ್ಟಗಿ ತಾಲೂಕಿನ ವಿಸ್ತರಣಾಧಿಕಾರಿಗಳಾದ ಬಸವರಾಜ್ ಯರದೊಟ್ಟಿ ಮಾತನಾಡಿ ೧೯೧೨ರ ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ಭಾರತದಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಲು ಕನಿಷ್ಟ ಸದಸ್ಯರ ಸಂಖ್ಯೆ ಹತ್ತು ಇರತಕ್ಕದ್ದು. ಇದನ್ನು ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ನೋಂದಾಯಿಸಬೇಕು. ಷೇರುಗಳನ್ನು ಸದಸ್ಯರಿಗೆ ನೀಡುವುದರ ಮುಖಾಂತರ ಬಂಡವಾಳವನ್ನು ಸಂಗ್ರಹಿಸುತ್ತದೆ.
ಸ್ವಯಂ ಪ್ರೇರಣೆಯ ಸಂಘಟನೆ – ಸಹಕಾರಿ ಸಂಘದ ಸದಸ್ಯತ್ವ ಐಚ್ಛಿಕವಾಗಿದೆ. ಸದಸ್ಯತ್ವವು ಮುಕ್ತವಾಗಿದ್ದು,ಯಾವುದೇ ಭೇದವಿಲ್ಲದೆ ಎಲ್ಲಾ ವಯಸ್ಕರಿಗೂ ಸದಸ್ಯರಾಗಲು ಅವಕಾಶವಿದೆ. ಗ್ರಾಮಸ್ಥರು ಒಗ್ಗಟ್ಟಾಗಿ ಸಹಕಾರ ಸಂಘವನ್ನು ಬೆಳೆಸಬಹುದು ಎಂದರು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿಗಳಾದ ಶ್ರೀಮತಿ ರತ್ನಮ್ಮ ಹಕ್ಕುಂಡಿ, ಮಾನ್ಯಶ್ರೀ ಬಸವರಾಜ ಯರದೊಡ್ಡಿ, ಸಮಾಲೋಚಕರಾದ ಶ್ರೀ ಸೋಮಶೇಖರ ಗುರಿಕಾರ್ ಹಾಗೂ ಶ್ರೀ ಶರಣಪ್ಪ ಕಟಬಿರವರು, ತಾಲೂಕಿನ ವಿವಿಧ ಸಂಘಗಳ ಮಹಿಳೆಯರು ಭಾಗವಹಿಸಿದ್ದರು.

ವರದಿ ಯಮನೂರ ಎಂ. ಸಿಂಗನಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!