ಅಂಬರದಡಿಯಲಿ ಅರಳಿ ತೂಗಿತ್ತು ಕನಕಾಂಬರ
ಹಸಿರ ತೆನೆಯಲಿ ಬಾಗಿ ನಲಿದಿತ್ತು ಅದರ ಪ್ರಖರ
ಕೇಸರಿ ರಂಗಿನಲಿ ಕಾಣುತಿತ್ತು ಬಲು ಸುಂದರ
ಜೊತೆಯಲಿ ಜೋಡಿಸಲಾಯಿತು ಸುಲಲಿತ ಚಿತ್ತಾರ
ಎಕ್ಕದಾ ಮೊಗ್ಗುಗಳ ಅಲ್ಲಲ್ಲಿ ಇರಿಸಲು ಶೃಂಗಾರ
ನೀಡುತಿದೆ ಮುದದಿ ಮನಕೆ ಉಲ್ಲಾಸದ ಆಗರ
ಸಾಹಿತ್ಯ ಪ್ರಿಯರಿಗಿದೊ ಒಂದು ಕಾವ್ಯದಾ ಹಾರ
ಬೆಂಗದಿರೋದಯದಲಿ ಆಸ್ವಾದಿಸುವ ಪರಸ್ಪರ
- ಲಲಿತಾ ಕೆ ಆಚಾರ್, ಬೆಂಗಳೂರು




















