ಕಣ್ಣಿಗೆ ಕಾಣದ ಭಾವನೆಗಳ ಹಿಡಿದು,
ಚರ್ಮದ ಮೇಲೆ ಅಚ್ಚೊತ್ತಿದ ಕಥೆಯಿದು.
ಹಸಿರು ಕೊರಳಿನ ನವಿಲಿನ ಸೌಂದರ್ಯದಂತೆ,
ಮನದ ಮೂಲೆ ಕಂಗೊಳಿಸಿದೆ ರಂಗಿನಂತೆ ll೦೧ll
ಅರೆಮುಚ್ಚಿದ ಕಣ್ಣಿನ ಆಳದ ನೋಟ,
ಹೇಳುತಿದೆ ಪ್ರೀತಿಯ ಮೌನದಾ ಆಟ.
ತುಟಿಯಂಚಿನ ಕೆಂಪು ನಗುವಿನ ಸಂಕೇತ,
ಬದುಕಿನ ಪಯಣಕೆ ನೀಡಿದೆ ಹೊಸ ಚೇತನ ll೦೨ll
‘₹upa’ ಎಂಬ ಹೆಸರಲಿ ಅಡಗಿದೆ ಜೀವಾಳ,
ಎರಡು ಹೃದಯಗಳ ಬೆಸೆದ ಪ್ರೇಮದ ಆಳ.
ನೆನಪುಗಳ ಪುಟಕೆ ಈ ಹಚ್ಚೆಯೇ ಸಾಕ್ಷಿ,
ಹಾರಾಡಲಿ ಒಲವು ಎಂದೆಂದಿಗೂ ಮುಕ್ತ ಹಕ್ಕಿ ll೦೩ll
ಶಿವಶರಣೆ : ರೂಪಾ ಬ. ನಾಟೀಕಾರ, ಮುದ್ದೇಬಿಹಾಳ




















