ಮುಸುಕಿನೊಳಗೆ ಅಡಗಿದ್ದ ಜೋಳದ ಪಕಳೆಗಳು
ಬಿಡಿಸಿ ನೋಡಿದಾಗ ಸಿಕ್ಕ ಬಂಗಾರದ ಎಳೆಗಳು
ಉದರದಿ ಮಲಗಿದ್ದ ದಿಂಡಿನಾ ತುಣುಕುಗಳು
ಕತ್ತರಿಸಿ ಸಿಂಗರಿಸಲಾಗಿರುವ ಸಿಪ್ಪೆಯ ಗರಿಗಳು
ನಡು ನಡುವಲಿ ಆಪಲ್ ಸಿಪ್ಪೆಯ ತಿಲಕಗಳು
ಆಚೀಚೆಯಲಿ ಇರಿಸಿಹ ಮಾವಿನ ತೊಗಟೆಗಳು
ಜೋಡಿಸೆ ಕಾವ್ಯ ಚಿತ್ತಾರವಾಗಿಸಿತು ಬೆರಳುಗಳು
ನಲ್ಮನಗಳಿಗಿದೊ ಶುಭ ಲಹರಿಯ ರಂಜನೆಗಳು
- ಲಲಿತಾ ಕೆ ಆಚಾರ್ ಬೆಂಗಳೂರು




















