ಕೊಪ್ಪಳ/ ಗಂಗಾವತಿ: ತಾಲೂಕಿನ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ಮಾಲಿ ಪಾಟೀಲ್ ಪತ್ರಿಕಾ ಮಾಧ್ಯಮದವರಿಗೆ ಮಾತನಾಡಿ, ದೇಶಾದ್ಯಂತ 10 ರಾಜ್ಯಗಳಿಂದ 24 ರಾಜ್ಯಸಭಾ ಸ್ಥಾನಗಳು ಖಾಲಿಯಾಗಿದ್ದು ಕರ್ನಾಟಕ ರಾಜ್ಯದ 4 ಸ್ಥಾನಗಳು ಸೇರಿವೆ ನಾಲ್ಕರಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲದಲ್ಲಿ 3 ಸ್ಥಾನಗಳು ದೊರೆಯಲಿದ್ದು ಅದರಲ್ಲಿ ಒಂದು ಸ್ಥಾನ ಉತ್ತರ ಕರ್ನಾಟಕದ ಅಲ್ಪಸಂಖ್ಯಾತರ ಪ್ರಭಾವಿ ಮುಖಂಡರು, ಶ್ರೀ ಮಾನ್ಯ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿಯವರಿಗೆ ನೀಡಬೇಕು, ಇತ್ತೀಚಿಗೆ ನಡೆದ ಎಲ್ಲಾ ಉಪ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದೆ ಮತ್ತು ಮತ ಬ್ಯಾಂಕ್ ಎಂದು ನಿರೂಪಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಅನ್ಸಾರಿಯವರ ಸೇವೆಯನ್ನು ಕಾಂಗ್ರೆಸ್ ಪಕ್ಷ ಉಪಯೋಗಿಸಿಕೊಳ್ಳಬೇಕೆಂದು ಗಂಗಾವತಿಯ ಆರಾಧನಾ ಸಮಿತಿ ಸದಸ್ಯರು ಮತ್ತು ವೀರಶೈವ ಸಮಾಜದ ಮುಖಂಡರಾದ ವಿಶ್ವನಾಥ ಮಾಲಿಪಾಟೀಲ್ ರಾಜ್ಯದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳಿಗೂ ಹಾಗೂ ಜಿಲ್ಲೆಯ ಸಚಿವರಾದ ಶ್ರೀ ಮಾನ್ಯ ಶಿವರಾಜ್ ತಂಗಡಿಗಿರವರಿಗೆ, ಮನವಿ ಮಾಡಿಕೊಂಡರು. ಕೇಂದ್ರ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಸಗೊಬ್ಬರಗಳ ದರ ಏರಿಕೆ ಮಾಡುವುದರ ಮೂಲಕ ಗ್ಯಾಸ್ ಸಿಲಿಂಡರ್,ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಮತ್ತು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ, ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು ಕಾಂಪ್ಲೆಕ್ಸ್ 1800-2100 ರೂ ಆಗಿದೆ , ಪೊಟ್ಯಾಶ್ 1400-1800 ರೂ ಆಗಿದೆ ರೈತರಿಗೆ ಅತ್ಯಗತ್ಯವಾದ ರಸಗೊಬ್ಬರಗಳ ಬೆಲೆ ಏರಿಕೆಯಿಂದ ಚಿಂತಾಕ್ರಾಂತರಾಗಿದ್ದು ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿ ರೈತರಿಗೆ ನೇರವಾಗಬೇಕು ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ರೈತರೊಂದಿಗೆ ಸೇರಿ ಹೋರಾಟ ಮಾಡಲಾಗುವುದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವಿಶ್ವನಾಥ್ ಪಾಟೀಲ್ ಹೇಳಿಕೆ ನೀಡಿದ್ದಾರೆ.




















