ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಸ್ತಿ16 .

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಜಂಗ ಹ್ಯಾನ್ಸ್ ಅಲಾರಂ ಕ್ಲಾಕ್-

ಈ ಒಂದು ಅಮೂಲ್ಯವಾದ ಆಸ್ತಿಯು ನಮ್ಮ ತಂದೆ ತಾಯಿಗಳು ಗತಿಸಿಹೋದ ಎಷ್ಟೋ ದಿನಗಳವರೆಗೆ ಇತ್ತು. ಈ ಅಲಾರಂ ಗಡಿಯಾರವನ್ನು ನಮ್ಮ ತಂದೆಯವರು 1956 ರಲ್ಲಿ ಮುಧೋಳದಲ್ಲಿ ಇರುವಾಗ ( ಬಾಗಲಕೋಟ್ ಜಿಲ್ಲೆ) ಕೊಂಡರು. ಬೆಲೆ ರೂಪಾಯಿ 19.80. ( ಫೋಟೋ ಲಗತ್ತಿಸಲಾಗಿದೆ). Junghans Uhren GmbH ಇದು ಒಂದು ಜರ್ಮನ್ ಕಂಪನಿಯಾಗಿದ್ದು 1903 ರಲ್ಲಿ ಅದರಲ್ಲಿ ಸುಮಾರು 3000 ಜನರು ಕೆಲಸ ಮಾಡುತ್ತಿದ್ದರು( ಕೃಪೆ ಅಂತರ್ಜಾಲ). ಈ ಅಲಾರಂ ಗಡಿಯಾರ ನಮ್ಮೆಲ್ಲಾ ಅಕ್ಕ, ಅಣ್ಣ, ತಂಗಂದಿರಿಗೆ ಪರೀಕ್ಷೆಯ ಸಮಯದಲ್ಲಿ ಸ್ಕೂಲ್ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹೋಗಲು ತುಂಬ ಉಪಯುಕ್ತವಾಗಿತ್ತು . ಅಲಾರಂ ಗಡಿಯಾರದ ಜೋರಾದ ಅಲಾರಾಂ ಧ್ವನಿಯು ನಮ್ಮನ್ನು ಬೆಳಗಿನ ಹೊತ್ತು ಸರಿಯಾದ ಸಮಯಕ್ಕೆ ಎಬ್ಬಿಸುತ್ತಿತ್ತು. ನಮ್ಮ ಪೋಷಕರು ಬಿಟ್ಟುಹೋದ ಈ ಅಮೂಲ್ಯವಾದ ಆಸ್ತಿಯು ನಮ್ಮೆಲ್ಲ ಮಕ್ಕಳಿಗೆ ತುಂಬಾ ಉಪಯುಕ್ತವಾಗಿತ್ತು.

Asset 16
ಇದೇ ತರಹ ಗಡಿಯಾರ ನಮ್ಮನೆಲೂ ಇತ್ತು. ನಮ್ಮನ್ನೆಲ್ಲ ಅಲಾರಾಂ ಕೊಟ್ಟು ಎಚ್ಚರಿಸಿ ಓದಿಸಿದ್ದೇ ಇದು.

  • Smt. Shanta Nagamangala

ಹಿಂದೆ ಎಲ್ಲರ ಮನೆಯಲ್ಲೂ ಇದೇ ಅಲಾರಂ ಗಡಿಯಾರ.
ಬೇಗ ಏಳಲು ಅಲಾರಂ ಅನ್ನು ತಲೆದಸಿಯಲೇ ಇಟ್ಟುಕೊಂಡು ಮಲಗುತ್ತಿದ್ದೆವೆ.
ಅಲಾರಂ ಹೊಡೆದ ತಕ್ಷಣ ಎಚ್ಚರಾಗಿ ತಕ್ಜಣ ಅದರ ತಲೆಯ ಮೇಲೆ ಕುಟ್ಟಿ ನಿಲ್ಲಿಸಿ, ಇನ್ನೊದೈದು ನಿಮಿಷದಲ್ಲಿ ಏಳುತ್ತೆನೆಂದು ಹಾಗೇ ಕಣ್ಣು ಮುಚ್ಚಿಕೊಂಡಿದ್ದರೆ ಎಷ್ಟೋ ಸಲ ಮತ್ತೆ ಎಚ್ಚರಾಗುತ್ತಿದ್ದದ್ದು ಒಂದೆರಡು ಗಂಟೆ ಕಳೆದಮೇಲೆಯೇ. “ಅಲಾರಂ ಹೊಡೆದ ತಕ್ಷಣ ಎದ್ದು ಬಿಟ್ಟೆ ಅಲ್ವಾ” ಎಂದು ಮನೆಯವರ ತಮಾಷಿಗೆ ವಸ್ತುವಾಗುತ್ತಿದ್ದದ್ದುಂಟು.

  • Smt. Ratnamurthy.

ನಿಜವಾಗಿಯೂ ಎಂದು ಮರೆಯಲಾಗದ ನೆನಪುಗಳು ಸರ್….

  • Nagaraj Nadagouda of Hungund

ನನ್ನ ಹತ್ರಾನು ಈ ರೀತಿ ಅಲರಾಮ್ ಇದೆ ಸಾರ್ ನಿಮ್ಮ ಅನುಭವಗಳನ್ನು ಸೇರಿಸಿ ಒಂದಿ ಬುಕ್ ಮಾಡಿ ಸಾರ್

  • Prakash Nadig , Tumkur
  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!