ರಾಯಚೂರು/ಸಿಂಧನೂರು:ಪಾಟೀಲ್ ಮಹಿಳಾ ಮಹಾವಿದ್ಯಾಲಯ ಸಿಂಧನೂರು ರಾಷ್ಟ್ರೀಯ ಸೇವಾ ಯೋಜನೆಯ ಎರಡನೇ ದಿನದ ವಿಶೇಷ ಶಿಬಿರ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ನೊಂದು ಬೆಂದಿರುವ ಅನಾಥ ಹಾಗೂ ವಯಸ್ಕರ ಬುದ್ದಿಮಾಂದ್ಯ ಜೀವಿಗಳ ಜೀವನದ ಅಂಶಗಳ ಬಗ್ಗೆ ಅಧ್ಯಯನ ಮಾಡುವುದರ ಮೂಲಕ ಈ ಜೀವಿಗಳ ಆರೋಗ್ಯ ಯೋಗ ಕ್ಷೇಮ ಅವರ ದೈನಂದಿನ ಜೀವನದ ಕ್ಷಣಗಳನ್ನು ಅರಿತುಕೊಳ್ಳುವ ಮೂಲಕ ನೆರವೇರಿತು.ಈ ವಿಶೇಷ ಶಿಬಿರದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಕ್ಕಮಹಾದೇವಿ ಮಹಿಳಾ ಪಿಜಿ ಸೆಂಟರ್ ನ ವಿಶೇಷ ಅಧಿಕಾರಿಗಳಾದ ಡಾ.ನಾಗರಾಜ ಮಾತನಾಡಿ ಇಂದು ಈ ಶಿಬಿರದಲ್ಲಿ ಭಾಗವಹಿಸಿರುವ ಸುಮಾರು 120ಕ್ಕೂ ಹೆಚ್ಚು ಮಹಿಳಾ ವಿದ್ಯಾರ್ಥಿಗಳು ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಮೈಗೂಡಿಸಿಕೊಂಡ ನೀವೆಲ್ಲರೂ ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆಯನ್ನು ಬೆಳಗಬೇಕಾದರೆ ಅಲ್ಲಿರುವ ನಿಮ್ಮ ತಂದೆ ತಾಯಿಗಳ ಸ್ವರೂಪಿಗಳಾದ ನಿಮ್ಮ ಅತ್ತೆ ಮಾವಂದಿರನ್ನು ಮಾತಾ ಪಿತೃಗಳ ಭಾವನೆಗಳೊಂದಿಗೆ ಅವರ ಸೇವೆ ಮಾಡಬೇಕು. ನಾನು ಅದೆಷ್ಟೋ ಶಿಬಿರಗಳಲ್ಲಿ ಪಾಲ್ಗೊಂಡಿದ್ದೇನೆ ಆದರೆ ಇಂತಹ ಪವಿತ್ರವಾದಂತಹ ಕಾರುಣ್ಯ ಕುಟುಂಬದ ಈ ಕಾರ್ಯಕ್ರಮ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಈ ಕ್ಷಣದ ಅನುಭವ ಮಾಡಿಸಿರುವ ಪಾಟೀಲ್ ಮಹಿಳಾ ಮಹಾವಿದ್ಯಾಲಯದ ಸಂಸ್ಥಾಪಕರಾದ ಆರ್.ಸಿ.ಪಾಟೀಲ್ ನಿಜವಾದ ದೇವರುಗಳು ಆಶ್ರಯ ಪಡೆದುವ ಈ ಕಾರುಣ್ಯ ಆಶ್ರಮಕ್ಕೆ ಬೆನ್ನೆಲುಬಾಗಿರುವುದು ಮತ್ತು ಕಾಣದ ಕೈಗಳಾಗಿ ತೆರೆಯ ಹಿಂದೆ ಈತನ ಸಮಾಜ ಸೇವೆ ಸಮಾಜಕ್ಕೆ ಅಪಾರವಾಗಿದೆ ಇಂದು ಈ ಶಿಬಿರದ ಉಪಯೋಗ ಪಡೆದುಕೊಂಡಿರುವ ವಿದ್ಯಾರ್ಥಿಗಳೆ ಇಂತಹ ಕಾರುಣ್ಯ ಕುಟುಂಬದಂತಹ ಪವಿತ್ರ ಸ್ಥಳದಲ್ಲಿ ನಿಮ್ಮ ಶಿಕ್ಷಣದ ಜೀವನದಲ್ಲಿ ಹಿರಿಯರನ್ನು ಗೌರವಿಸುವುದು ಅವರುಗಳ ಮನಸ್ಸಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೀರಿ ಎನ್ನುವ ಭಾವನೆ ನನಗಿದೆ ಎಂದು ಮಾತನಾಡಿ ವಿದ್ಯಾರ್ಥಿಗಳಿಗೆ ಹಿರಿಯ ನಾಗರಿಕರ ಬಗ್ಗೆ ಜಾಗೃತಿ ಅರಿವು ಮೂಡಿಸಿ ಉಪನ್ಯಾಸ ಮಾಡಿದರು. ನಂತರ ಮಾತನಾಡಿದ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಇಂದು ನಮ್ಮ ಆರ್. ಸಿ.ಪಾಟೀಲ್ ಅವರು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಇಲ್ಲಿರುವ ಜೀವಿಗಳ ಜೀವನವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭಾರತೀಯ ಪ್ರಜೆಗಳಾಗಬೇಕು ಎನ್ನುವ ಸಂಕಲ್ಪವನ್ನು ಹೊಂದಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಕಾರುಣ್ಯ ಕುಟುಂಬದಲ್ಲಿ ಹಮ್ಮಿಕೊಳ್ಳುತ್ತಿರುವುದು ನಮಗೆ ಸಂತೋಷವೆನಿಸಿದೆ. ಎರಡು ಮೂರು ದಿನಗಳ ಹಿಂದೆಯಷ್ಟೇ ನಗರದ ಒಳಬಳ್ಳಾರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಾರುಣ್ಯಾಶ್ರಮದ ಶೌಚಾಲಯಗಳಿಗೆ ಬಾಗಿಲುಗಳನ್ನು ನಿರ್ಮಿಸಿ ಕೊರೋನದಂತಹ ಸಂಕಷ್ಟದ ಸಮಯದಲ್ಲಿ ನೆರವಾಗಿರುವುದು ಅವರ ಸಮಾಜ ಪರ ಕಾಳಜಿ ನಾಡಿಗೆ ಮಾದರಿಯಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪಾಟೀಲ್ ಮಹಿಳಾ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಆರ್. ಸಿ. ಪಾಟೀಲ್ ಉಪನ್ಯಾಸಕರುಗಳಾದ ಆನಂದ ಪುರೋಹಿತ. ಬಸವರಾಜ. ಲೋಕೇಶ ಆಚಾರ. ಚನ್ನಬಸವ. ಕಾಲೇಜಿನ ವಿದ್ಯಾರ್ಥಿನಿ ಪ್ರತಿನಿಧಿಯಾದ ಕು.ಲಕ್ಷ್ಮಿ ಇವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು ಈ ಕಾರ್ಯಕ್ರಮದಲ್ಲಿ ಈ ಕಾಲೇಜಿನ ಉಪನ್ಯಾಸಕರಾದ ಬಸವರಾಜ ಕಾರುಣ್ಯ ಆಶ್ರಮಕ್ಕೆ ಸುಮಾರು 5000=00 ರೂ.ಗಳನ್ನು ಸಹಾಯ ಮಾಡಿ ಮಾನವೀಯತೆ ಮೆರೆದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.