ಯಾದಗಿರಿ//ಮಾರ್ಚ್ 03. ಜಿಲ್ಲೆಯ ಗುರುಮಿಟ್ಕಲ್ ತಾಲೂಕ ಮಗದಂಪೂರ ಗ್ರಾಮದ ಸುಮಾರು 400 ಅಡಿ ಎತ್ತರದ ಬೆಟ್ಟದ ಮೇಲೆ ಇರುವ ಭಗವಾನ್ ಶ್ರೀ ಮಹರ್ಷಿ ವಾಲ್ಮೀಕಿ ಮಂದಿರ ಹಾಗೂ ಅನಂತೇಶ್ವರ ಶಿವಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಗದ್ಗುರುಗಳಾದ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು ಹಾಗೂ ಈ ಕಾರ್ಯಕ್ರಮವನ್ನು ಶ್ರೀಯುತ ಮರಿಯಪ್ಪ ನಾಯಕ ಮಗದಂಪೂರ, ಭೀಮರಾಯ ಠಾಣಗುಂದಿ, ಶ್ರವಣಕುಮಾರ , ಶಹಾಪುರ ದೇವೇಂದ್ರಪ್ಪ , ಡಾ. ಶಾರದಾ ವಿನಾಯಕ ಸ್ಪಂದನ ಆಸ್ಪತ್ರೆ ರಾಯಚೂರು, ಸಮಾಜದ ಎಲ್ಲಾ ಮುಖಂಡರು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಸಂಜಯ ಕುಮಾರ್ ಗುರುಗಳು, ಗೋಲಪಲ್ಲಿ ಗುರುಗಳು ,ಸರ್ವ ಸಮಾಜದ ಗುರುಗಳು, ಹಾಗೂ ರಾಜಕೀಯ ಮುಖಂಡರಾದ ಕೆಪಿಸಿಸಿ ಕಾರ್ಯದರ್ಶಿ ಶ್ರೀ ಸತೀಶ್ ಜಾರಕಿಹೊಳಿ ಸಾಹುಕಾರ್, ಶ್ರೀ ನಾಗನಗೌಡ ಕಂದಕೂರು, ಮಾನ್ವಿ ಶಾಸಕ ಶ್ರೀ ರಾಜವೆಂಕಟಪ್ಪ ನಾಯಕ ಮತ್ತು ಸುರುಪುರ ಶಾಸಕ ರಾಜುಗೌಡ ಮುಂತಾದವರು ಹಾಜರಿದ್ದರು ಹಾಗೂ ಸುಮಾರು 5000 ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗುರುಮಿಟ್ಕಲ್ ವೀರಶೈವ
ಸಮಾಜದ ಗುರುಗಳು ಮಾತನಾಡಿ, ಪುಣ್ಯಾನಂದ ಪುರಿ ಮಹಾ ಸ್ವಾಮೀಜಿ ಮತ್ತು ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಸಮಾಜಕ್ಕೆ ಎರಡು ಕಣ್ಣುಗಳಿಂದ ಹಾಗೆ. ಪುಣ್ಯಾನಂದ ಪುರಿ ಸ್ವಾಮೀಜಿ ಹಳ್ಳಿ ಹಳ್ಳಿಗೆ ತಿರುಗಿ ಸಮಾಜದ ಸಂಘಟನೆ ಮಾಡಿದರು. ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ರಾಜನಹಳ್ಳಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದಲ್ಲದೆ 250ಕ್ಕೂ ಹೆಚ್ಚು ದಿನಗಳು ಧರಣಿ ನಡೆಸಿ ಎಸ್ಸಿ ಎಸ್ಟಿಗೆ 7.5 ಮೀಸಲಾತಿ ಕಲ್ಪಿಸಿದರು ಎಂದರು. ಹಾಗೂ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಮಾತನಾಡಿ, ನಮ್ಮ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ 7.5% ಮೀಸಲಾತಿಯನ್ನು ಸದುಪಯೋಗ ಪಡೆದುಕೊಳ್ಳಿ ಮತ್ತು ಸರಕಾರ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಎಸ್ಸಿ ಎಸ್ಟಿ ಸಮುದಾಯದವರು ಮುಂದೆ ಬರಬೇಕು ಎಂದು ಹೇಳಿದರು.
ವರದಿ:- ವೆಂಕಟೇಶ.ಹೆಚ್. ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.